Bhasaka
← Back to home

ನೆನೆಯೋ, ಎಲೆ ಮನವೆ, ನವನೀತ ಕೃಷ್ಣನ

Author: ಕನಕದಾಸCategory: ಶ್ರೀಕೃಷ್ಣRaaga: ಮುಖಾರಿTaala: ಛಾಪುತಾಳ
ನೆನೆಯೋ, ಎಲೆ ಮನವೆ, ನವನೀತ ಕೃಷ್ಣನ ||ಪ|| ನೆನೆಯೋ ಗೋಪೀತನಯ ಕಂಸನ ಮನೆಯ ಕೊಂಡಾತನ ||ಅ|| ತರಳ- ಚೆಲುವ ಮುಂಗುರುಳ ಹುಲಿಯುಗುರ ಕೊರಳ ಉಂಗುರಗಳ ಬೆರಳ ಕಾಲಿಗೆ ಕಟ್ಟಣಳ ನಿಲುವುತಿಹ ದುರುಳ ತನದಲಿ ತುರುಗಳ ಕಾಯ್ದವನ ||1|| ವಿಷವನುಣಿಸಿ ತಲ್ಲಣಿಸುವ ಹುರಿತ ಸಹೊಸವ (ದುರಿತ ಸಹವಾಸವ?) ಆದರಾವಿ ದಾಸವ (ಅದರ ವಿಲಾಸವ?) ನೋಡಿದರೆ ಸಿಸುವಾಗಿ ಬಲು ಅಸುರರ ಗೆಲಿದವನ ||2|| ಸಲಯ ಕಾಳಿಂಗನ ತಲೆಪಿಡಿದ ಕಂಗೊಲೆಯ ಮೊರೆ ಕೇಳಿ ಬಲಿಯ ಅವನ ಕೋಮಲೆಯ ಕಿವಿಗೆ ಪೂಮಾಲೆಯಾದ ನೀಟುಗಾಯ ನೆಲೆಯಾದಿಕೇಶವನ ||3||

Thoughts & Reflections

0

No reflections shared yet. Be the first to share your thoughts!

Share your thought