Bhasaka
← Back to home

ನೇಮವಿಲ್ಲದ ಹೋಮ

Author: ಕನಕದಾಸCategory: ಇತರೆRaaga: ಮುಖಾರಿTaala: ಝಂಪೆತಾಳ
ನೇಮವಿಲ್ಲದ ಹೋಮವೇತಕೆ ರಾಮನಾಮವಿರದ ಮಂತ್ರವೇತಕೆ ||ಪ|| ನೀರು ಮುಣುಗಲು ಏಕೆ ನಾರಿಯಳ ಬಿಡಲೇಕೆ ವಾರಕೊಂದುಪವಾಸ ಮಾಡಲೇಕೆ ನಾರಸಿಂಹನ ದಿವ್ಯ ನಾಮವನು ನೆನೆದರೆ ಘೋರ ಘಾತಕವೆಲ್ಲ ತೊಲಗಿ ಹೋಗುವುದು ||1|| ಅಂಬರವ ತೊರೆಯಲೇಕೆ ತಾಂಬೂಲ ಬಿಡಲೇಕೆ ಡಂಭಕದ ವೃತ್ತಿಯಲಿ ಇರಲೇತಕೆ ಅಂಬುಜನಾಭನನು ಭಾವದಲಿ ನೆನೆದರೆ ಇಂಬುಂಟು ವೈಕುಂಠವೆಂಬ ಪುರದೊಳಗೆ ||2|| ಬಂಧದೊಳಗೆ ಬಿದ್ದು ಹರಿಯನೆ ನೆನೆಯುತಿರೆ ಬೆಂದು ಹೋಗುವುವು ದುರಿತಂಗಳೆಲ್ಲ ಬಂದ ದುಃಖಗಳೆಲ್ಲ ನಿಲ್ಲದಲೆ ಕಳೆಯುವುವು ಚೆಂದಾಗಿ ನೆಲೆಯಾದಿಕೇಶವನ ನೆನೆಯೆ ||3||

Thoughts & Reflections

0

No reflections shared yet. Be the first to share your thoughts!

Share your thought