Bhasaka
← Back to home

ನೋಡಿ ಮರುಳಾಗದಿರು ಪರಸತಿಯರ

Author: ಕನಕದಾಸCategory: ಇತರೆRaaga: ಭೈರವೀTaala: ಝಂಪೆತಾಳ
ನೋಡಿ ಮರುಳಾಗದಿರು ಪರಸತಿಯರ ||ಪ|| ನಾಡೊಳಗೆ ಕೆಟ್ಟವರ ಪರಿಯ ನೀನರಿತು ||ಅ|| ಶತಮಖವ ಮಾಡಿ ಸುರಸಭೆಗೈದ ನಹುಷ ತಾ ನಾತುರದಿ ಶಚಿಗೆ ಮನಸೋತು ಭ್ರಮಿಸಿ ಅತಿ ಬೇಗ ಚಲಿಸೆಂದು ಬೆಸಸಲಾ ಮುನಿಯಿಂದ ಗತಿಗೆಟ್ಟು ಉರಗನಾಗಿದ್ದ ಪರಿಯರಿತು ||1|| ಸುರಪತಿಯು ಗೌತಮನ ಸತಿಗಾಗಿ ಕಪಟದಿಂ ಧರೆಗೆ ಮಾಯಾವೇಷ ಧರಿಸಿ ಬಂದು ಪರಮ ಮುನಿಯ ಶಾಪದಿಂದಂಗದೊಳು ಸಾ ಸಿರ ಕಣ್ಗಳಾಗಿರ್ದ ಪರಿಯ ನೀನರಿತು ||2|| ಸ್ಮರನ ಶರತಾಪವನು ಪರಿಹರಿಸಲರಿಯದೆ ದುರುಳ ಕೀಚಕನು ದ್ರೌಪದಿಯ ತುಡುಕಿ ಮರುತ ಸುತ ಭೀಮನಿಂದಿರುಳೊಳಗೆ ಹತನಾಗೆ ನರಗುರಿಯೆ ನಿನ್ನ ಪಾಡೇನು ಧರೆಯೊಳಗೆ ||3|| ಹರನ ವರವನು ಪಡೆದು ಶರಧಿ ಮಧ್ಯದೊಳಿದ್ದು ದುರುಳ ದಶಶಿರನು ಜಾನಕಿಯನೊಯ್ಯೆ ಧುರದೊಳಗೆ ರಘುವರನ ಶರದಿಂದ ಈರೈದು ಶಿರಗಳನೆ ಹೋಗಲಾಡಿಸಿದ ಪರಿಯನರಿತು ||4|| ಇಂತಿಂಥವರು ಕೆಟ್ಟು ಹೋದರೆಂಬುದನರಿತು ಭ್ರಾಂತಿಯನೆ ಬಿಟ್ಟು ಭಯಭಕ್ತಿಯಿಂದ ಕಂತುಪಿತ ಕಾಗಿನೆಲೆಯಾದಿಕೇಶವನ ನಿ ರಂತರದಿ ಭಜಿಸಿ ನೀ ಸತ್ಯಸುಖಿಯಾಗು ||5||

Thoughts & Reflections

0

No reflections shared yet. Be the first to share your thoughts!

Share your thought