Bhasaka
← Back to home

ಪಕ್ಷಿ ಬಂದಿದೆ ಗಂಡಭೇರುಂಡ

Author: ಕನಕದಾಸCategory: ಶ್ರೀಕೃಷ್ಣRaaga: ಮಧ್ಯಮಾವತಿTaala: ರೂಪಕತಾಳ
ಪಕ್ಷಿ ಬಂದಿದೆ ಗಂಡಭೇರುಂಡ- ತನ್ನ ಕುಕ್ಷಿಯೊಳು ಈರೇಳು ಜಗವನಿಂಬಿಟ್ಟಂಥ ||ಪ|| ಜಾತಿ ಸೂತಕವೆಂಬ ತ್ರಿಮಲಕ್ಕೆ ಶೂಲದಂತಿಹ ಪರವಸ್ತು ||ಅ|| ತಿರುಮಂತ್ರೋದಯವೆಂಬಾಸನವನೆ ಪೊತ್ತು ತಾ ಹರುಷದಿಂದ ವೈಷ್ಣವರೆಡೆಯ ಪಾಡಿ ಪರವ ತೋರುವೆನೆಂದು ಪಾಕವನೆತ್ತುತಾ ಹರಿಹರ ಬ್ರಹ್ಮಾದಿಗಳ ಪುಟ್ಟಿಸಿದಂಥ ||1|| ಅಕಾರ ಉಕಾರ ಮಕಾರ ಸಾಕಾರದಿಂದ ಪರಮ ರೂಪವ ತಾಳಿ ಅಕಾರ ಕ್ರಿಯಾ ನಾಮ ಮಕಾರವನು ಓಂಕಾರದಿಂದ ಪುಟ್ಟಿಸಿದಂಥ ಪರವಸ್ತು ||2|| ಪಾಖಂಡವೆಂತೆಂಬ ಪರವಾದಿಗಳನ್ನು ಲೋಕದೊಳು ತಮ್ಮೊಳಗೈಕ್ಯಮಾಡಿ ಜಗ ದೇಕ ಪತಿ ತಿರುವಕೋವಲೂರಿನೊಳಿರುವಂಥಾ ದಿಕೇಶವರಾಯ ತಾನಾದ ಪರವಸ್ತು ||3||

Thoughts & Reflections

0

No reflections shared yet. Be the first to share your thoughts!

Share your thought