Bhasaka
← Back to home

ಪರಮ ಪದವಿಯೆ ಶ್ರೀರಂಗಂ

Author: ಕನಕದಾಸCategory: ಶ್ರೀಕೃಷ್ಣRaaga: ಮಧ್ಯಮಾವತಿTaala: ಆದಿತಾಳ
ಪರಮ ಪದವಿಯೆ ಶ್ರೀರಂಗಂ ಪರವಾಸುದೇವರೆ ಶ್ರೀರಂಗಂ ||ಪ|| ವೇದನಾಲ್ಕು ಶೃಂಗಾರವಾದ ಓಂಕಾರ ವಿಮಾನವೆ ಶ್ರೀರಂಗಂ ಸಾಧಿಸಿ ಪೂರ್ವಾಚಾರ್ಯರು ನೆಲಸಿಹ ಆದಿ ವಿಮಾನವೆ ಶ್ರೀರಂಗಂ ||1|| ಸತ್ಯಲೋಕದಲಿ ಬ್ರಹ್ಮನು ಪೂಜಿಪ ವಸ್ತು ವಿಮಾನವೆ ಶ್ರೀರಂಗಂ ಭಕ್ತಿಗೆ ಇಕ್ಷ್ವಾಕುರಾಯಗೊಲಿದು ಬಂದ ಉತ್ತಮಾಯೋಧ್ಯವೆ ಶ್ರೀರಂಗಂ ||2|| ತ್ರೇತಾಯುಗದಿ ವಿಭೀಷಣನಿಗೆ ರಘು ನಾಥನು ಕೃಪೆ ಇತ್ತ ಶ್ರೀರಂಗಂ ಪ್ರೀತಿಸಿ ದಕ್ಷಿಣಭೂಮಿಯೊಳಗೆ ರಂಗ ನಾಥ ನೆಲಸಿಹ ಶ್ರೀರಂಗಂ ||3|| ಮುನ್ನ ಕಾವೇರಿ ಉಭಯ ಮಧ್ಯದೊ ಳಿನ್ನು ಶೋಭಿಪುದೆ ಶ್ರೀರಂಗಂ ಸನ್ನುತ ಭಕ್ತರ ಸಲಹುವ ಬಿರುದಿನೊ ಳಿನ್ನು ತೋರುವುದೆ ಶ್ರೀರಂಗಂ ||4|| ಶೇಷನ ಮೇಲೆ ಪವಳಿಸಿ ಲಂಕಾ ದೇಶವ ನೋಡುವ ಶ್ರೀರಂಗಂ ಶ್ರೀಸಿರಿನಾಯಕೀ ರಮಣ ಕೇಶವರಾಯರ ಮಹಿಮೆಯೆ ಶ್ರೀರಂಗಂ ||5||

Thoughts & Reflections

0

No reflections shared yet. Be the first to share your thoughts!

Share your thought