Bhasaka
← Back to home

ಪರಮಪದವಿಯನೀವ ಗುರುಮುಖ್ಯ ಪ್ರಾಣನ

Author: ಕನಕದಾಸCategory: ಶ್ರೀಕೃಷ್ಣ
ಪರಮಪದವಿಯನೀವ ಗುರುಮುಖ್ಯ ಪ್ರಾಣನಧರೆಯೊಳಗುಳ್ಳ ಮಾನವರೆಲ್ಲ ಭಜಿಸಿರೊ ಅಂದು ತ್ರೇತಾಯುಗದಿ ಹನುಮನಾಗವತರಿಸಿಬಂದು ದಾಶರಥಿಯ ಪಾದಕೆರಗಿಸಿಂಧುವನು ದಾಂಟಿ ಮುದ್ರಿಕೆಯಿತ್ತು ದಾನವರವೃಂದಪುರ ದಹಿಸಿ ಚೂಡಾಮಣಿಯ ತಂದವನ||1|| ದ್ವಾಪರಯುಗದಲಿ ಭೀಮಸೇನನೆನಿಸಿಶ್ರೀಪತಿಯಪಾದ ಕಡು ಭಜಕನಾಗಿಕೋಪಾವೇಶದಲಿ ದುಶ್ಶಾಸನನನು ಸೀಳಿಭೂಪನ ಜಲದೊಳಗೆ ಕರೆಕರೆದು ಜರೆದವನ ||2|| ಕಲಿಯುಗದಲಿ ತುರೀಯಾಶ್ರಮವನೆ ಧರಿಸಿಕಲುಷದ ಮಾಯಿಗಳನೆ ಸೋಲಿಸಿಖಿಲವಾದ ಮಧ್ವಮತವನು ಬಲಿದೆನಿಸಿ ಕಾಗಿನೆಲೆಯಾದಿಕೇಶವನೆ ಪರದೈವನೆಂದವನ ||3||

Thoughts & Reflections

0

No reflections shared yet. Be the first to share your thoughts!

Share your thought