Bhasaka
← Back to home

ಪಾಪಾತ್ಮ ನಾನಲ್ಲ ಪಾಪವೆನದಿನಿತಿಲ್ಲ

Author: ಕನಕದಾಸCategory: ಶ್ರೀಕೃಷ್ಣRaaga: ಮುಖಾರಿTaala: ಆಟತಾಳ
ಪಾಪಾತ್ಮ ನಾನಲ್ಲ ಪಾಪವೆನದಿನಿತಿಲ್ಲ ||ಪ|| ಶ್ರೀಪತಿಯೆ ನಿನಗೆ ನೀನೇ ಮಾಡಿಕೊಂಡೆ ||ಅ|| ವರದನು ಕರದಲಿ ಉಷ್ಣಜಲ ಮೃತ್ತಿಕೆಯ ತರಲು ಕೈ ಸುಟ್ಟಾಗ ಪಣೆಯ ಠೊಣೆದು ಬೈದೆ ಮರಳಿ ನಾಚಿಕೆ ಇರದೆ ಚರಣಕೆ ಪಾವುಗೆ ತಂ ದಿರಿಸಿದಪರಾಧ ಎನ್ನದೊ ನಿನ್ನದೊ ದೇವ ||1|| ಬಂದ ಭೃಗು ಮುನಿ ಎದೆಯನೊದೆಯೆ ಆತಗೆ ಪಾಪ ಅಂದು ಮೂದಲಿಸಿ ಬೈದವರಿಗೆ ದೋಷ ನಿಂದುದೇ ಹಣೆಯೊಳಗೆಸೆಯೆ ಭೀಷ್ಮಂಗಘವು ಹೊಂದಿದಾ ಪಾಂಡವರಿಗೆ ಕುಂದು ಬಂದಿತೆ ದೇವ ||2|| ಕುರುಡನಿಗೆ ದಾರಿಯನು ತೋರದೆ ಆತಗೆ ಮುನಿದು ದರಿಗೆ ನೂಕಿದಡೆ ಅವನು ಏನು ಮಾಡುವನು ಶಿರಕೆ ತಪ್ಪಾಗಿ ಗುರಿಯಿಡಲದು ಸರಳ ತಪ್ಪೆ ಅರಸನಾಳ ಕೊಂದಡೆ ಆರೇನು ಮಾಡುವರು ||3|| ಕುಣಿಸಿದರೆ ಆಡುವುದು ಬೊಂಬೆ ಸೂತ್ರಮುಖದಿ ಇನಿತುಂಟೆ ಕಪಟನಾಟಕ ಸೂತ್ರಧಾರಿ ಇನಿತಾಡಿಸಿದರಾಡುವೆ ಪಾಪ ಪುಣ್ಯಂಗಳಿಂದ ಎಣಿಕೆಗಾನಲ್ಲ ನೀನಲ್ಲದಿಲ್ಲ ||4|| ತಂದೆತಾಯಿಗಳು ತಮ್ಮ ಕಂದಗೆ ಸರ್ಪಮುಖ ದಿಂದ ಕಚ್ಚಿಸಲು ಆ ತಪ್ಪು ಕಂದನದೆ ಮುಂದರಿಯದಜ್ಞಾನಿಯೆಂದು ಕ್ಷಮಿಸೆಲ್ಲವನು ತಂದೆ ವೇಲಾಪುರದ ಆದಿಕೇಶವನೆ ||5||

Thoughts & Reflections

0

No reflections shared yet. Be the first to share your thoughts!

Share your thought