Bhasaka
← Back to home

ಜಯತು ಗುರು ವಿವೇಕಾನಂದ

Author: ಪ್ರಭುಪ್ರಸಾದ್Category: ಶ್ರೀಸ್ವಾಮಿ ವಿವೇಕಾನಂದ
ಜಯತು ಗುರು ವಿವೇಕಾನಂದ ಜಯತು ಸ್ವಾಮೀಜೀ|| ರಾಮಕೃಷ್ಣಹೃದಯಕಿರಣ ನಿನ್ನ ಪದಕೆ ಕೋಟಿ ನಮನ|| ರಾಮಕೃಷ್ಣಹೃದಯಕಿರಣ ನಿನ್ನ ಪದಕೆ ಕೋಟಿ ನಮನ|| ಬಂಧ ಮುಕ್ತಿ ಪಡೆದ ಬಾಳು ಉಲ್ಲಾಸದಿ ನಲಿದಿದೆ ದೀನದಲಿತರೆದೆಯ ನೆಲದಿ ಹೊಸ ಭರವಸೆ ಚಿಮ್ಮಿದೆ|| ಮೂಕ ಮೂಢ ಜನರ ಮುಖದಿ ನುಡಿಯ ಬೆಳಕು ಅರಳಿದೆ ಮೃತಸಮಷ್ಟಿ ಲೋಕಹೃದಯ ಜೀವದುಂಬಿ ಮಿಡಿದಿದೆ|| ತಮ ಸಮುದ್ರ ಮಥಿಸಿತಂದ ಮಹಾಮಂತ್ರ ನೀಡಿದೆ ಅಭೀ ಎಂಬ ಆಭಯ ನುಡಿಯ ಆತ್ಮನಿಧಿಯ ಮಾಡಿದೆ|| ಮಹಾಮಾಯೆಯೆಸೆದ ಜಾಲ ಆಯಿತೀಗ ನಿಷ್ಫಲ ಎಲ್ಲ ಬಗೆಯ ದ್ವಂದ್ವಭಾವ- ವಳಿದು ಬಂತು ಶಿವಫಲ||

Thoughts & Reflections

0

No reflections shared yet. Be the first to share your thoughts!

Share your thought