Bhasaka
← Back to home

ಪೋಗದೋ ಛಳಿ ಪೋಗದೋ

Author: ಕನಕದಾಸCategory: ಇತರೆRaaga: ಪೂರ್ವೀTaala: ಮುಟ್ಟೆತಾಳ
ಪೋಗದೋ ಛಳಿ ಪೋಗದೋ ||ಪ|| ಹಳೆಯ ಹಚ್ಚಡ ಸಕಲಾತಿ ಚಿಮ್ಮುರಿ ಟೊಪ್ಪಿಗೆ ಬಿಳಿಯ ಕಂಬಳಿ ಪೊದ್ದರೆ ಪೋಗದೋ ನಳಿನಾಕ್ಷಿಯ ತನ್ನ ತೊಡೆಯ ಮೇಗಡೆ ಇಟ್ಟು ಕಳಸಕುಚದ ಮೇಲೆ ಕೈಯಿಕ್ಕಿದಲ್ಲದೆ ||1|| ಬಡನಡುವಿನ ಬಟ್ಟಕುಚದ ಕಾಮಿನಿರನ್ನೆ ಬೆಡಗಿನಲಿ ನಗುತ ನಲ್ಲನ ಬಳಿಗೆ ಬರಲು ಒಡನೆಯೆ ಮೋಹದಿಂ ಪಿಡಿದೆತ್ತಿ ಲಲನೆಯ ನಡುಮಂಚದ ಮೇಲೆ ಕೆಡಹಿಕೊಂಡಲ್ಲದೆ ||2|| ಛಳಿಗಾರದೆ ವಿಷ್ಣು ಛಳಿಗಾರದೆ ಶಿವ ಘಳಿಲನೆ ಗಂಗೆಯ ಬೀಸಾಡಲು ಛಳಿಯ ಕಾರಣವೇನು ನೆಲೆಯಾದಿ ಕೇಶವ ತಿಳಿದು ನೀ ಹೇಳಯ್ಯ ಛಳಿಯ ವಿವರವನು ||3||

Thoughts & Reflections

0

No reflections shared yet. Be the first to share your thoughts!

Share your thought