Bhasaka
← Back to home

ಪ್ರಾಚೀನ ಕರ್ಮವಿದು ಬಿಡಲರಿಯದು

Author: ಕನಕದಾಸCategory: ಶ್ರೀಕೃಷ್ಣRaaga: ಕಾಂಬೋಧಿTaala: ಝಂಪೆತಾಳ
ಪ್ರಾಚೀನ ಕರ್ಮವಿದು ಬಿಡಲರಿಯದು ಯೋಚನೆಯ ಮಾಡಿ ಬಳಲುವುದೇಕೆ ಮನುಜ ||ಪ|| ಸೇತುವೆಯ ಕಟ್ಟಿ ಲಂಕೆಗೆ ಹಾರಿ ಹನುಮಂತ ಖ್ಯಾತಿಯಿಂದಲಿ ರಾವಣನ ಕೊಲ್ಲಿಸಿ ಸೀತೆಯನು ತಂದು ಶ್ರೀರಾಮನಿಗೆ ಕೊಡಲಾಗಿ ಪ್ರೀತಿಯಲಿ ಕೌಪೀನ ಬಿಡಿಸಲಿಲ್ಲ ಹರಿಯು ||1|| ಲೋಕಾದಿಲೋಕಗಳ ಚರಿಸುವ ರವಿರಥಕೆ ಏಕಗಾಲಿಯು ಏಳುಕುದುರೆಗಳ ಕಟ್ಟಿ ಲೋಕಲೋಕಗಳನೆಲ್ಲ ಚರಿಸುವ ಅರುಣನಿಗೆ ಬೇಕೆಂದು ಚರಣಗಳ ಕೊಡಲಿಲ್ಲ ಹರಿಯು ||2|| ಸಾಸಿರ ನಾಮದ ಒಡೆಯಾದಿಕೇಶವನ ಬೇಸರಿಸದೆ ಹೆಗಲ ಮೇಲಿರಿಸಿಕೊಂಡು ಆಕಾಶ ಮಾರ್ಗದಲಿ ಚರಿಸುವ ಗರುಡನಿಗೆ ನಾಸಿಕದ ಕೊನೆಡೊಂಕು ತಿದ್ದಲಿಲ್ಲ ಹರಿಯು ||3||

Thoughts & Reflections

0

No reflections shared yet. Be the first to share your thoughts!

Share your thought