← Back to home
ಬಂದದೊಂದು ಚೆಂದ ಸಾಲದೆ ಗೋಪಿಯ ಕಂದ
Author: ಕನಕದಾಸCategory: ಶ್ರೀಕೃಷ್ಣRaaga: ಕಲ್ಯಾಣೀTaala: ಆದಿತಾಳ
ॐ
ಬಂದದೊಂದು ಚೆಂದ ಸಾಲದೆ ಗೋಪಿಯ ಕಂದ ||ಪ||
ವಿಕಟ ಪೂತನಿಯ ಕೊಂದು
ಶಕಟಾಸುರನ ಪಾದದಿ ತುಳಿದು
ಧಿಕಿಟ ಧಿಕಿಟ ಎನ್ನುತಲಿ
ಕುಕಿಲಿರಿದು ಕುಣಿಯುತ ಮನೆಗೆ ||1||
ಗೋವರ್ಧನ ಪರ್ವತವನೆತ್ತಿ
ಗೋವುಗಳ ಕಾಯ್ದು ತನ್ನ
ಮಾವ ಕಂಸನ ಕೊಂದು
ಕಾವನ ಜನಕ ಪಾಡುತ ಮನೆಗೆ ||2||
ಫಾಲನೇತ್ರ ಚಂದ್ರಶೇಖರನ
ಸುಲಭದಿಂದ ಬಾಧೆಯ ಬಿಡಿಸಿ
ಪಾಲಿಸುವ ಕರುಣದಿಂದ
ಬೇಲಾಪುರದ ಚೆನ್ನ ಕೇಶವ ||3||
Thoughts & Reflections
0No reflections shared yet. Be the first to share your thoughts!