Bhasaka
← Back to home

ಬಂಧುಗಳದಾರಿಗಾರಿದ್ದರೇನು

Author: ಕನಕದಾಸCategory: ಶ್ರೀಕೃಷ್ಣ
ಬಂಧುಗಳದಾರಿಗಾರಿದ್ದರೇನು - ಇಷ್ಟ ಬಂಧು ತ್ರೈಜಗಕೆ ಶ್ರೀಹರಿಯಲ್ಲದೆ - ಮಿಕ್ಕ ಬಂದುಗಳದಾರಿಗಾರಿದ್ದರೇನು ನೆಗಳ ಕೈಯಲ್ಲಿ ಮಾತಂಗವು ಸಿಕ್ಕಿ ಒದರಲಾಗಿ - ಆ ನೆಗಳೇನ ಮಾಡುತಿರ್ದವಡವಿಯಲಿ ನಗಜೆಯಾಳ್ದನ ಬ್ರಹ್ಮೇತಿ ಬಂದು ಕಾಡಲಾಗಿ ರುದ್ರಾ ದಿಗಳೇನ ಮಾಡುತಿರ್ದರಾ ಶೈಲದೊಳಗೆ ||1|| ದಿಂಡೆಯ ಮಾರ್ಗದಿ ಮಲತಾಯಿ ಮಗನ ಹೊಡೆಯಲು ಮಂಡಲ ಪತಿ ಏನ ಮಾಡುತಿರ್ದನು ಮಿಂಡಿ ಪೆಣ್ಣನು ಸಭೆಯಲ್ಲಿ ಸೀರೆ ಸುಲಿಯಲು ಗಂಡರೈವರು ನೋಡಿ ಏನ ಮಾಡುತಿರ್ದರಯ್ಯ ||2|| ಮೃಗಚಕ್ರವರ್ತಿ ಬಹುವರನಾಗಿ ಪೋಗುತ್ತಿರೆ ಮಿಗೆ ಸತಿಸುತರೇನ ಮಾಡುತಿರ್ದರು ಮೃಗಮಾನವಾಕಾರ ಕಾಗಿನೆಲೆಯಾದಿಕೇಶವನಲ್ಲದೆ ಮಿಗು ಬಂಧುಗಳದಾರಿಗಾರಿದ್ದರೇನು ||3||

Thoughts & Reflections

0

No reflections shared yet. Be the first to share your thoughts!

Share your thought