ॐ
ಬಯಗುತನಕ ಆಟ ಕೂಟ ಊಟದ ಕೆಲಸ ಉಂಡ ಮೇಲೆ ಶಯನ ||ಪ||
ಬಯಲಾಯಿತು ಈ ಒಗತನವೆಲ್ಲ ರಕ್ಷಿಸಯ್ಯ ರಘುಕುಲ ತಿಲಕ ||ಅ||
ಪುರಾಣವಿಲ್ಲ ಪುಣ್ಯ ಕಥೆಯಿಲ್ಲ ಪಾರಾಯಣದಿ ಮನಸಿಲ್ಲ
ತರೋಣ ಬರೋಣ ತಿನ್ನೋಣ ಮಲಗೋಣ ಮತ್ತೇಳೋಣ ||1||
ಕಣ್ಣಿಗೆ ಜೋಂಪು ಹತ್ತುವತನಕ ಅನ್ಯ ವಿಷಯ ಮಾತುಕತೆಯಾಟ
ಹೆಣ್ಣು ಹೊನ್ನು ಮಣ್ಣು ಮಮಕಾರದಿ ಒಳಹೊರಗಿಣುಕಾಟ ||2||
ಹೀಗಾಗಿ ನಿನ್ನಲ್ಲಿಗೆ ಬಂದೆ ಇನ್ನಾದರು ಸಲಹೊ ಸಿರಿ
ಕಾಗಿನೆಲೆಯಾದಿಕೆಶವ ಶಿರಬಾಗಿ ಬೇಡಿಕೊಂಬೆ ||3||
Thoughts & Reflections
0No reflections shared yet. Be the first to share your thoughts!