Bhasaka
← Back to home

ಬಲಗೊಂಬೆ ಚೆನ್ನರಾಯ ಭಕ್ತರ ಪ್ರಿಯ

Author: ಕನಕದಾಸCategory: ಶ್ರೀಕೃಷ್ಣRaaga: ದ್ವಿಜಾವಂತಿTaala: ಆದಿತಾಳ
ಬಲಗೊಂಬೆ ಚೆನ್ನರಾಯ ಭಕ್ತರ ಪ್ರಿಯ ||ಪ|| ವೇದ ವಾದಗಳಲ್ಲಿ ಕಾದುವ ಜನರಲ್ಲಿ ಓದುವ ವಿದ್ಯೆಗಳಲ್ಲಿ ವಾದವ ಗೆಲಿಸಯ್ಯ ||1|| ಆರು ವೈರಿಗಳಲ್ಲಿ ಅಷ್ಟ ಗಜಂಗಳಲ್ಲಿ ಮೂರು ಏಳರಲ್ಲಿ ಮುಂದೆ ನೀ ಗೆಲಿಸಯ್ಯ||2|| ಪರಮ ಭಕ್ತಿಯೊಳ್ನಿನ್ನ ಚರಣಕೆರಗುವೆ ಮುನ್ನ ಸಿರಿಯ ಪಾಲಿಪ ಚೆನ್ನ ವರದ ಕೇಶವ ರನ್ನ ||3||

Thoughts & Reflections

0

No reflections shared yet. Be the first to share your thoughts!

Share your thought