Bhasaka
← Back to home

ಜಯತು ಜಯತು ರಾಮಕೃಷ್ಣ

Author: ಹೆಚ್ ಎನ್ ಮುರಳೀಧರCategory: ಶ್ರೀರಾಮಕೃಷ್ಣRaaga: ಯಮನ್Taala: ದಾದರಾ
ಜಯತು ಜಯತು ರಾಮಕೃಷ್ಣ ಜಯತು ಭುವನಮಂಗಲ ಜಯತು ತಾಯಿ ಮಹಾಮಾಯಿ ಶಾರದೇ ಸುನಿರ್ಮಲ | ಜಯತು ಶ್ರೀವಿವೇಕಾನಂದ ತಮವ ಕಳೆವ ಭಾಸ್ಕರ ಶ್ರೀಗುರುವಿನ ಆತ್ಮಪುತ್ರ ಬ್ರಹ್ಮಾನಂದ ಸಾಗರ || ಜಯತು ಜಯತು ಪ್ರೇಮಾನಂದ - ಪ್ರೇಮಾಮೃತ ಸಿಂಚನ ತ್ಯಾಗವ್ರತನೆ ಶಿವಾನಂದ ಗುರುಶಕ್ತಿಯ ದರ್ಶನ | ಕಾಮನೆಗಳ ಗೆದ್ದ ಯೋಗಿ ಜಯತು ಯೋಗಾನಂದನೆ ಧೀರ - ವೀರ ನಿರಂಜನನೆ ನಿನ್ನ ಪಾದಕೆ ವಂದನೆ || ಗುರುಸೇವೆಯ ಮೂರ್ತರೂಪ ರಾಮಕೃಷ್ಣಾನಂದನೆ ಅಕ್ಷರದಲಿ ನೆಲೆನಿಂದಿಹ ಅದ್ಭುತ ಆನಂದನೆ | ತಾಪಸಿ ನೀ ಅಭೇದಾನಂದ ಜ್ಞಾನಮೂರ್ತಿ ಜಯ ಜಯ ದೇಹಭಾವವಳಿದ ಯತಿ ತುರೀಯಾನಂದ ನಿರ್ಭಯ || ತಾಯ ಹಿತವ ಸತತ ಕಾಯ್ದ ಶರಚ್ಚಂದ್ರ ವಾಸುಕಿ ಗಂಗಾಧರನೆ ಜೀವಸೇವೆಯಲ್ಲಿ ಶಿವನ ಸಮ್ಮುಖಿ | ಜಯತು ಜಯತು ಹರಿಪ್ರಸನ್ನ ಪ್ರಸನ್ನಾತ್ಮ ಸಂತತ ಶ್ರೀಗೋಪಾಲ ನಿನ್ನ ಇರವೆ ತಾಯ ಚರಣಕರ್ಪಿತ || ಬಾಲಕನೊಲು ಸರಳ-ಶಾಂತ ಶ್ರೀಸುಬೋಧಾನಂದನೆ ತಾಯ ಪದದಿ ತನ್ಮಯ ನೀ ಶಾರದಾಪ್ರಸನ್ನನೆ | ಕಥಾಮೃತದ ಹೊನಲ ತಂದ ಗುಪ್ತ ಶ್ರೀಮಹೇಂದ್ರನೆ ಶ್ರದ್ದೆಬಲದಿ ಕೊಳೆಯ ತೊಳೆದ ಶ್ರೀಗಿರೀಶಚಂದ್ರನೆ || ತ್ಯಾಗದುರಿಯ ಹೆಡೆಯೆತ್ತಿದ ದುರ್ಗಾಚರಣನಾಗನೆ ಸೇವೆಯಲ್ಲೆ ಸಾರ್ಥಕತೆಗೆ ಸಂದಿಹ ಬಲರಾಮನೆ | ನಿಮ್ಮ ನೆನಹು ನಮ್ಮ ಮನವ ಬೆಳಗುತಿರಲಿ ಸರ್ವದಾ ನೀವೆ ನಮ್ಮ ನಿತ್ಯಸ್ಫೂರ್ತಿ - ಸತ್ಯಸಿರಿಯ ಸಂಪದ ||

Thoughts & Reflections

0

No reflections shared yet. Be the first to share your thoughts!

Share your thought