Bhasaka
← Back to home

ಬಾಯಿ ನಾರಿದ ಮೇಲೆ ಏಕಾಂತವೆ

Author: ಕನಕದಾಸCategory: ಶ್ರೀಕೃಷ್ಣRaaga: ಕಾಂಬೋಧಿTaala: ಝಂಪೆತಾಳ
ಬಾಯಿ ನಾರಿದ ಮೇಲೆ ಏಕಾಂತವೆ ತಾಯಿ ತೀರಿದ ಮೇಲೆ ತೌರಾಸೆಯೆ ||ಪ|| ಕಣ್ಣು ಕೆಟ್ಟ ಮೇಲೆ ಕಡುರೂಪ ಚೆಲ್ವಿಕೆಯೆ ಬಣ್ಣಗುಂದಿದ ಮೇಲೆ ಬಹುಮಾನವೆ ಪುಣ್ಯ ತೀರಿದ ಮೇಲೆ ಪರಲೋಕ ಸಾಧನವೆ ಸುಣ್ಣವಿಲ್ಲದ ವೀಳ್ಯವದು ಸ್ವಾದುಮಯವೆ ||1|| ಕಿಲುಬಿನಾ ಬಟ್ಟಲೊಳು ಹುಳಿ ಕಲಸಿ ಉಣಬಹುದೆ ಚಳಿಜ್ವರಕೆ ಚಂದನದ ಲೇಪ ಹಿತವೆ ಮೊಲೆ ಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆ ಬೆಲೆ ಬಿದ್ದ ಸರಕಿನೊಳು ಲಾಭ ಉಂಟೆ ||2|| ಪಥ್ಯ ಸೇರದ ಮೇಲೆ ನಿತ್ಯ ಸುಖವೆನಬಹುದೆ ಸತ್ತ್ವ ತಗ್ಗಿದ ಮೇಲೆ ಸಾಮರ್ಥ್ಯವೆ ಪೃಥ್ವಿಯೊಳು ಕಾಗಿನೆಲೆಯಾದಿಕೇಶವ ನಿನ್ನ ಸತ್ಯವಾದ ಭಕ್ತಿ ಇರದವಗೆ ಮುಕ್ತಿಯುಂಟೆ ||3||

Thoughts & Reflections

0

No reflections shared yet. Be the first to share your thoughts!

Share your thought