ॐ
ಬಾರೊ ಭಾಗ್ಯದ ನಿಧಿಯೆ, ದಯಾಂಬುಧಿಯೆ
ಸಾರಿದವರ್ಗಿತ್ತೆ ಸುಧೆ
ವಾರಿಜಾರಿ ಕೌಮುದಿ
ವಾರಿಜಧರ ಮುದದಿ
ಸಾರಸ ಹೃದಯದಿ
ಕೇರಿ ಕೇರಿಯಲಿ ಶೃಂಗಾರದಿ ಮೆರೆವ ಅಪಾರ ದಯಾನಿಧಿ
ವಿಜಯ ನಿಮ್ಮಯ ಪಾದ ಭಜಕರಿಗೆ ಕೊಡಲಿ
ವಿಜಯ ದಶಮಿಯಲ್ಲಿ ವಿಜಯರಥದಲ್ಲಿ ಕೂತು
ವಿಜಯಳ ಸಹಿತದಿ ವಿಜಯ ಮಾಡುತ ಬಾರೊ
ವಿಜಯ ಸಾರಥಿ ಆದಿ
ವಿಜಯ ರಥದಿ ಪರ ರವಿಜನ ನೀ ಸೋಲಿಸಿ
ತ್ರಿಜಗ ವಿಜಯ ವೇಷ ವಿಜಯಗಿತ್ತು ಮೆರೆದೆ
ವಿಜಯ ಮೂರುತಿಯೆ ||1||
ದಶದಶನಂದ ಏಕಾದಶ ಚಂದ್ರಶೇಖರ ದ್ವಾ-
ದಶಾದಿತ್ಯ ಮಾರುತರು ದಶ ವಿಶ್ವದೇವ ಯಾತ್ರಾ
ದಶನಾ ಏಕಾ ಸರ್ವದಾ
ದಶಋಷಿ ಮುನಿ ನೃಪ ದಶದಿಕ್ಕಿನ ಜನರು
ದಶಮ ಉತ್ಸವ ನೋಡಿ ದಶದಶದಲಿ ನಿಂದು
ದಶಮತಿ ವಂದಿತ ದಶಶಿರ ಸಂಹರ
ದಶರೂಪದಲಿ ಖಳದಶನ ಮೂರುತಿಯೆಂದು
ಹೆಸರು ಹೇಳುವರು ||2||
ಪದುಮನಾಭ ಪದ್ಮೇಶ ಪದುಮಮಾಲಿ ಪದ್ಮಾಕ್ಷ
ಪದುಮ ಪಾಣಿ ಪದ್ಮಾಂಘ್ರಿ ಪದುಮಸಖ ತೇಜಿ
ಪದುಮ ಕಲ್ಪದಿ ನಾಭಿ ಪದುಮದಿ ಚತುರ್ಮುಖ
ಪದುಮ ಜನ ಪಡೆದು ಪದುಮಜಾಂಡವಡೆದಿ
ಪದುಮ ಪೀಠನ ಹೃತ್ಪದುಮದಿ ನಿನ್ನ
ಪದುಮ ತೋರುತ ಬಾರೊ ಕಾಗಿನೆಲೆಯಾದಿಕೇಶವ
ಹದುಳದಿಂದ ಬಾರೊ ಭಾಗ್ಯದ ನಿಧಿಯೆ ||3||
Thoughts & Reflections
0No reflections shared yet. Be the first to share your thoughts!