Bhasaka
← Back to home

ಬೀದಿಯೊಳು ಯಾತರಾ ನಂಟು ಬೇಡ

Author: ಕನಕದಾಸCategory: ಶ್ರೀಕೃಷ್ಣRaaga: ಆನಂದ ಭೈರವಿTaala: ಆದಿತಾಳ
ಬೀದಿಯೊಳು ಯಾತರಾ ನಂಟು ಬೇಡ ದಮ್ಮಯ್ಯ ||ಪ|| ಭೇದಿಸಿ ನೋಡುವರುಂಟು ಬೆಂಬತ್ತಿ ಬಾರದಿರಯ್ಯ ||ಅ|| ಕಂಡ ಕಂಡ ಠಾವಿನಲ್ಲಿ ಕಣ್ಣೆತ್ತಿ ನೋಡದಿರಯ್ಯ ಕಂಡಿಯೊಳು ಕೈಸನ್ನೆ ಮಾಡದಿರಯ್ಯ ಗಂಡನುಳ್ಳವಳ ಜೊತೆ ಭಂಡಾಟವ್ಯಾಕಯ್ಯ ಕೊಂಡೆಗಾತಿಯರುಂಟು ದುಡುಕದಿರಯ್ಯ ||1|| ಬೇಳುವೆಯ ಮಾತಾಡಿ ಗಾಳ ಹಾಕದಿರಯ್ಯ ಬಾಳೆ ಹಣ್ಣಿಗೆ ಕೊಡಲಿ ಬೇಕೆ ದಮ್ಮಯ್ಯ ಆಳುವ ಅರಸಾಗಿ ನಿನಗಾವ ಬರವಯ್ಯ ಮೇಳದವರ ಬಿಟ್ಟು ಮೇರೆದಪ್ಪುವರೇನಯ್ಯ||2|| ನೋಡುವರು ಜನರೆಲ್ಲ ನಾಚಿಕೆ ಇಲ್ಲವೇನಯ್ಯ ಜೋಡು ಕಳಸವ ಹಿಡಿಯದಿರು ಜೋಕೆ ದಮ್ಮಯ್ಯ ಮಾಡುವ ದೈನ್ಯವ ಬಲ್ಲೆ ಮದ್ದೂರು ನರಸಿಂಹಯ್ಯ ಕೂಡಿದ ಕನಕನಾದಿಕೇಶವ ನೀನಹುದಯ್ಯ ||3||

Thoughts & Reflections

0

No reflections shared yet. Be the first to share your thoughts!

Share your thought