Bhasaka
← Back to home

ಬೇಕೆಂದರೆ ಬಾರದು ಒಲ್ಲೆನೆಂದರೆ ಹೋಗದು

Author: ಕನಕದಾಸCategory: ಶ್ರೀಕೃಷ್ಣ
ಬೇಕೆಂದರೆ ಬಾರದು ಒಲ್ಲೆನೆಂದರೆ ಹೋಗದು ಏಕಂಜುವಿ, ಶ್ರೀಹರಿ ಕರುಣಿಸದೆ ಒಂದೂ ಆಗದು ||ಪ|| ಸುಖವಾದಡೆ ಕಾಣುತ ಮುಖ ಕಮಲವು ವಿಕಸಿತವಾಹುದು ಶ್ರೀಹರಿ ಕರುಣದಿ ದುಃಖವಾದಡೆ ದುಸ್ಥಿತಿಯಲಿರಲು ಅಂ- ಬಕದಲಿ ಜಲ ಪೋಗುವುದೇಕೊ? ಸುಖದುಃಖ ದಿವ ರಾತ್ರಿಯ ತೆರವದರಿಂದಲಿ ನರರಂ ಗಕೆ ಬಾಹುದು, ರಕ್ಷಣೆ ಮಾಡುವ ಕಾಶಿಪೀತಾಂಬರ ಮಕರ ಕುಂಡಲಾಭರಣನ ನೆನೆ ಮನವೆ ||1|| ಸಿರಿ ಬಂದರೆ ಸಿರಿಗಾನಂದವ ಮಾಡು ವಿರೇತಕೆ ಮನ ನಿರ್ಮಳ ಧ್ವನಿಯಲಿ ದರಿದ್ರವು ಬಂದರೆ ಧಾತುಗೆಟ್ಟು ದೇಹಾತುರ ಹೊಂದುವಿರೇತಕೆ ದುಗುಡದಿ ಸಿರಿ ದಾರಿದ್ರ್ಯವು ಸುರತತಿಗಡರುವ ತೆರನೆಂದರಿದದರಿಂದಲಿ ಮಾನ ವರಿಗೆ ಬಾಹುದು, ಪರಿಹರಿಸುವ ಪರಮಾತ್ಮನೆನಿಪ ಮುರವೈರಿಯ ಬಿಡದಿರು ಎಲೆ ಮನವೆ ||2|| ಜನನವಾದರೆ ಹಾಡಿ ಹರಸಲೇತಕೆ ಅನುಗತಿಯನು ಹೇಳಿದರಳಲೇಕೆ ಜನನಮರಣವದೆಲ್ಲರಿಗೆ ಗತಿಬಾಹುದು ಏಕೆ ಜನನ ಮರಣವನೊಂದು ಹೊರಗೆ ಮಾಡಿ ಪರ ಜನದೊಳಗಿರಿಸುವ ಸುಜನೇಶ ಮುನೀಶನೆಂ ದೆನಿಸುವ ಕಾಗಿನೆಲೆಯಾದಿಕೇಶವರಾಯನ ಅನುಶ್ರುತಿಯನು ಬಿಡದಿರು ಎಲೆ ಮನವೆ ||3||

Thoughts & Reflections

0

No reflections shared yet. Be the first to share your thoughts!

Share your thought