Bhasaka
← Back to home

ಜಾಲಿಯ ಮರದಂತೆ

Author: ಪುರಂದರದಾಸCategory: ಶ್ರೀಕೃಷ್ಣRaaga: ಬಾವುಲ್Taala: ದೀಪಚಂದಿ
ಜಾಲಿಯ ಮರದಂತೆ ಧರೆಯೊಳು | ದುರ್ಜನರು ಜಾಲಿಯ ಮರದಂತೆ || ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂತೆ || ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ ಹಸಿದು ಬಂದವರಿಗೆ ಹಣ್ಣು ಇಲ್ಲ| ಕುಸುಮ ವಾಸನೆ ಇಲ್ಲ ಕೂಡಲು ಸ್ಥಳವಿಲ್ಲ ರಸದಲ್ಲಿ ಸ್ವಾದವು ವಿಷದಂತೆ ಇರುತಿಹ || ತನ್ನಿಂದ ಉಪಕಾರ ತೊಟಕಾದರೂ ಇಲ್ಲ ಬಿನ್ನಾಣ ಮಾತಿಗೆ ಕೊನೆಯಿಲ್ಲವು | ಅನ್ನಕ್ಕೆ ಸೇರಿದ ಹೀನ ಮಾನವರಂತೆ ಇನ್ನಿವರ ಕಾರ್ಯವು ಪುರಂದರವಿಟ್ಠಲ ||

Thoughts & Reflections

0

No reflections shared yet. Be the first to share your thoughts!

Share your thought