Bhasaka
← Back to home

ಬ್ರಹ್ಮ ಲಿಖಿತವ ಮೀರಿ ಬಾಳ್ವರುಂಟು

Author: ಕನಕದಾಸCategory: ಶ್ರೀಕೃಷ್ಣRaaga: ಕಾಂಬೋಧಿTaala: ಆಟತಾಳ
ಬ್ರಹ್ಮ ಲಿಖಿತವ ಮೀರಿ ಬಾಳ್ವರುಂಟು ನಿರ್ಮಳದಿ ವೈಷ್ಣವರ ಮನಮುಟ್ಟಿ ಭಜಿಸಿ ||ಪ|| ಪಾಪಕೆ ಹೇಸದ ಶಬರ ಬಟ್ಟೆಯನು ಕಾದಿರಲು ಆ ಪಥದಿ ಸಲೆ ವೈಷ್ಣವನು ಬಂದು ಪಾಪವನು ತಪ್ಪಿಸಿ ರಾಮನಾಮವ ಕೊಡಲು ಕಾಪಥಕ ವಾಲ್ಮೀಕಿ ಮುನಿಯಾಗಲಿಲ್ಲವೆ? ||1|| ಪಂಚಮಹಾಪಾತಕವ ಮಾಡಿದ ಅಜಾಮಿಳನ ವಂಚಿಸಿ ಯಮದೂತರೆಳೆದೊಯ್ಯುತಿರಲು ಕಿಂಚಿತ್ತು ಹರಿನಾಮವನಾಕಸ್ಮಿಕದಿ ನೆನೆಯೆ ಅಂಚಿಗೆಳೆದೊಯ್ದವರು ವಿಷ್ಣುದೂತರಲ್ಲವೆ? ||2|| ಬಾಲಕ ತನ್ನ ತಾಯ್ತಂದೆಯೊಳ್ ಮುನಿದು ಹಲವು ಕಾಲ ವನದೊಳು ತಪವ ಮಾಡಲು ನೀಲಮೇಘಶ್ಯಾಮ ಮೆಚ್ಚಿ ಬಾಲಕನಿಗೆ ಮೇಲಾದ ಪದವಿಯನು ಕೊಡಲಿಲ್ಲವೆ? ||3|| ದಶಕಂಠನನುಜನು ಜಾನಕಿಯ ಬಿಡ ಹೇಳೆ ಅಸುರ ಕೋಪವ ತಾಳಿ ಹೊರಗಟ್ಟಿದಾಗ ಪೆಸರಗೊಳುತ ಬಂದು ಮೊರೆಹೊಕ್ಕ ವಿಭೀಷಣಗೆ ಶಶಿರವಿ ಪರ್ಯಂತ ಪಟ್ಟಗಟ್ಟಲಿಲ್ಲವೆ? ||4|| ಕಲಿಗೆ ಬೆದರುವರಲ್ಲ ಕಾಲನ ಬಾಧೆಗಳಿಲ್ಲ ಛಲದಿ ನರಳಿ ಪುಟ್ಟುವ ಗಸಣೆಯಿಲ್ಲ ಒಲಿದು ಕಾಗಿನೆಲೆಯಾದಿಕೇಶವರಾಯನ ಸಲೆ ನಂಬಿದವರಿಗೆ ಮುಕುತಿಯಿತ್ತುದಿಲ್ಲವೆ? ||5||

Thoughts & Reflections

0

No reflections shared yet. Be the first to share your thoughts!

Share your thought