Bhasaka
← Back to home

ಭಜಿಸಿ ಬದುಕೆಲೊ ಮಾನವ

Author: ಕನಕದಾಸCategory: ಶ್ರೀಕೃಷ್ಣRaaga: ಕಾಂಬೋಧಿTaala: ಝಂಪೆತಾಳ
ಭಜಿಸಿ ಬದುಕೆಲೊ ಮಾನವ ||ಪ|| ಅಜಭವೇಂದ್ರಾದಿಗಳು ವಂದಿಸುವ ಪಾದವನು ||ಅ|| ಪಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ ಕಾಕುಶಕಟನ ಒದ್ದು ಕೊಂದ ಪಾದ ನಾಕಭೀಕರ ಬಕನ ಮೆಟ್ಟಿ ಸೀಳಿದ ಪಾದ ಲೋಕಪಾವನ ಗಂಗೆ ಪುಟ್ಟಿದ ಪಾದವನು ||1|| ಶಿಲೆಯ ಸತಿಯಳ ಬಂಧವಿಮುಕ್ತಿಗೊಳಿಸಿದ ಪಾದ ಒಲಿದು ಪಾರ್ಥನ ರಥವನೊತ್ತಿದ ಪಾದ ಕಲಿ ಸುಯೋಧನನ ಓಲಗದಿ ಕೆಡಹಿದ ಪಾದ ಕಲಕಿ ಕಾಳಿಂಗನ ಪೆಡೆ ತುಳಿದ ಪಾದವನು ||2|| ಗರುಡ ಶೇಷಾದಿಗಳು ಬಿಡದೆ ಪೊತ್ತಿಹ ಪಾದ ಧರೆಯನೀರಡಿ ಮಾಡಿ ಅಳೆದ ಪಾದ ಸಿರಿ ತನ್ನ ತೊಡೆಯಮೇಲಿರಿಸಿ ಒತ್ತುವ ಪಾದ ವರ ಕಾಗಿನೆಲೆಯಾದಿಕೇಶವನ ಪಾದವನು ||3||

Thoughts & Reflections

0

No reflections shared yet. Be the first to share your thoughts!

Share your thought