Bhasaka
← Back to home

ಭವತಿ ಭಿಕ್ಷಾಂ ದೇಹಿ ಪರಬ್ರಹ್ಮ

Author: ಕನಕದಾಸCategory: ಶ್ರೀಕೃಷ್ಣ
ಭವತಿ ಭಿಕ್ಷಾಂ ದೇಹಿ ಪರಬ್ರಹ್ಮ ಭವದೂರ ಮಾಂಪಾಹಿ ಭುವನ ಪಾವನ ಪರಮಾನಂದ ವರಗುಣಾ ಸುವಿಮಲ ಶಾಂತಿ ಸದ್ಭಕ್ತಿ ಜೀವನ್ಮುಕ್ತಿ ನಿತ್ಯ ನಿರ್ಮಲ ಜ್ಞಾನ ವಿಚಾರ ಪ್ರ- ವೃತ್ತಿ ವಿವೇಕದಾನ ಸತ್ಯ ಸದ್ವಿನಿಯ ಸಶ್ರವಣ ಮಾನಸಯೋಗ ಚಿತ್ತ ನಿಧಿಧ್ಯಾಸ ಜಪತಪವ್ರತ ಪೂಜಾ ||1|| ದೋಷ ರಹಿತ ಭಾಷ ದುರಿತಗುಣ ನಾಶ ಪರಮ ಸಂತೋಷ ಕ್ಲೇಶ ವಿದೂರ ವಿಶೇಷ ವಿರಾಗ ವಿಶ್ವಾಸ ವಿಹಿತ ಸದ್ಧರ್ಮ ವಿಚಾರ ||2|| ಪಾವನ ಪರಿಪೂರ್ಣ ಹೃದಯ ಸದಾ ದೇವ ನಾಮಸ್ಮರಣ ಭಾವ ಭರಿತ ಧ್ಯಾನ ಧಾರಣಯೋಗ ಸ- ದ್ಭಾವ ಬ್ರಹ್ಮ ಆದಿಕೇಶವ ದಾಸತೆ ||3||

Thoughts & Reflections

0

No reflections shared yet. Be the first to share your thoughts!

Share your thought