Bhasaka
← Back to home

ಭೀಮನೆಂಬುವಂಗೆ ಯಾತರ ಭಯವಿಲ್ಲ

Author: ಕನಕದಾಸCategory: ಶ್ರೀಕೃಷ್ಣ
ಭೀಮನೆಂಬುವಂಗೆ ಯಾತರ ಭಯವಿಲ್ಲ ಭೀಮರಾಯ ಕಾಮಿತ ಫಲಗಳ ಕೊಟ್ಟು ನೀ ಸಲಹಯ್ಯ ಭೀಮರಾಯ ಅಂಜನೆಯಾತ್ಮಜ ಅಗಣಿತ ಬಲವಂತ ಭೀಮರಾಯಕಂಜನಾಭನ ದೂತ ಕರುಣಿಸೊ ಬಲವಂತ ಭೀಮರಾಯ ||1|| ಕಟ್ಟಿದ ಪೂಮಾಲೆ ಕಸ್ತೂರಿ ನಾಮದ ಭೀಮರಾಯ - ಪೊಂಬಟ್ಟೆ ಪೀತಾಂಬರವನುಟ್ಟು ಮೆರೆವಂಥ ಭೀಮರಾಯ||2|| ವಾರಿಧಿಯನು ದಾಟಿ ಸೀತೆಗುಂಗುರವಿತ್ತ ಭೀಮರಾಯಸೂರಿವೆಗ್ಗಳತನ ಕಿತ್ತು ಈಡಾಡಿದ ಭೀಮರಾಯ||3|| ರಾಮರಾಯರಿಗೆ ನೀ ಪ್ರೇಮದ ಬಂಟನು ಭೀಮರಾಯಕಾಮಿತ ಫಲವಿತ್ತು ಕರುಣದಿ ಸಲಹಯ್ಯ ಭೀಮರಾಯ ||4|| ಛಪ್ಪನ್ನ ದೇಶಕ್ಕೆ ಒಪ್ಪುವ ಕಾಗಿನೆಲೆಯ ಭೀಮರಾಯತಪ್ಪದೆ ಕನಕಗೆ ವರಗಳ ಕೊಡುವಂಥ ಭೀಮರಾಯ ||5||

Thoughts & Reflections

0

No reflections shared yet. Be the first to share your thoughts!

Share your thought