Bhasaka
← Back to home

ಮಂಗಳಂ ಸರ್ವಜೀವ ರಕ್ಷಕಗೆ

Author: ಕನಕದಾಸCategory: ಶ್ರೀಕೃಷ್ಣRaaga: ಪೂರ್ವೀTaala: ಏಕತಾಳ
ಮಂಗಳಂ ಸರ್ವಜೀವ ರಕ್ಷಕಗೆ ಮಂಗಳಂ ಅಂಬುಜದಳಾಕ್ಷಗೆ ||ಪ|| ಜಲಪ ಒಮ್ಮೆಗೆ ತಂದವಗೆ ಮಂಗಳಂ ಕುಲಗಿರಿಯನು ಕಾಯ್ದವಗೆ ಮಂಗಳಂ ನೆಲನ ಕದ್ದ ಚೋರನ ಗೆಲಿದಗೆ ಮಂಗಳಂ ಸುಲಭ ನರಸಿಂಹನಿಗೆ ಶುಭಮಂಗಳಂ ||1|| ವಸುಧೆ ಈರಡಿ ಗೈದವಗೆ ಮಂಗಳಂ ವಸುಧೇಶ ಕುಲವನಳಿದಗೆ ಮಂಗಳಂ ದಶಕಂಧರನನು ಗೆಲಿದಗೆ ಮಂಗಳಂ ಪಶುಗಳ ಕಾಯ್ದವಗೆ ಮಂಗಳ |2|| ಪುತ್ರಯ ವಧು ವ್ರತವಳಿದಗೆ ಮಂಗಳಂ ತುರಗ ವಾಹನನಿಗೆ ಮಂಗಳಂ ಗರಡು ವಾಹನ ವಾರಿಧಿ ಶಯನ ವರ ಕಾಗಿನೆಲೆಯಾದಿಕೇಶವಗೆ ಮಂಗಳಂ ||3||

Thoughts & Reflections

0

No reflections shared yet. Be the first to share your thoughts!

Share your thought