Bhasaka
← Back to home

ಮಗುವಿನ ಮರುಳಿದು ಬಿಡದಲ್ಲ

Author: ಕನಕದಾಸCategory: ಶ್ರೀಕೃಷ್ಣRaaga: ಕಾಂಬೋಧಿTaala: ಆಟತಾಳ
ಮಗುವಿನ ಮರುಳಿದು ಬಿಡದಲ್ಲ- ಈ ||ಪ|| ಜಗದೊಳು ಪಂಡಿತರಿದ ಬಿಡಿಸಿ ||ಅ|| ನೀರನು ಕಂಡರೆ ಮುಳುಗುತಿದೆ- ತನ್ನ ಮೋರೆಯ ತೋರದೆ ಆಡುತಿದೆ ಧಾರಿಣಿ ಹಲ್ಲಲಿ ಎಳೆಯುತಿದೆ- ದೊಡ್ಡ ಭೈರವಾಕಾರದಿ ಕೂಗುತಿದೆ ||1|| ಪೊಡವಿಯ ಕೊಟ್ಟರೆ ಅಳೆಯುತಿದೆ- ತನ್ನ ಕೊಡಲಿಯೊಳು ಭೂಪರ ಕಡಿಯುತಿದೆ ಅಡವಿ ಕೋತಿಗಳ ಕೂಡುತಿದೆ- ಚೆಲ್ವ ಮಡದಿಯರನು ಹಿಡಿದೆಳೆಯುತಿದೆ ||2|| ಉಟ್ಟಿದ್ದ ವಸ್ತ್ರವ ಬಿಸುಡುತಿದೆ- ತನ್ನ ದಿಟ್ಟ ತೇಜಿಯನೇರಿ ನಲಿಯುತಿದೆ ಸೃಷ್ಟಿಯೊಳು ಭೂಸುರರ ಪೊರೆವ ಜಗ ಜಟ್ಟಿಯಾದಿಕೇಶವ ರಾಯನಂತೆ ||3||

Thoughts & Reflections

0

No reflections shared yet. Be the first to share your thoughts!

Share your thought