Bhasaka
← Back to home

ಮಣ್ಣಿನ ಮಹಿಮೆ ಮನುಜ ನೀನರಿಯೆ

Author: ಕನಕದಾಸCategory: ಇತರೆ
ಮಣ್ಣಿನ ಮಹಿಮೆ ಮನುಜ ನೀನರಿಯೆ ಷಣ್ಮಹಿಷಿಯುತ ಸರ್ವೋತ್ತಮನ ಲೀಲೆ ||ಪ|| ಮಣ್ಣಲಿ ದೊರಕಿದಳು ಮಾತಾಯಿ ಸೀತಾ ಮಣ್ಣಳೆದ ವಾಮನ ಮಹಬಲಿಯ ಬೇಡಿ ಮಣ್ಣು ಪಾವನವಾಯ್ತು ರಾಮಪದ ಸ್ಪರ್ಶದಿ ಮಣ್ಣುಂಡ ಬಾಯಲಿ ಬ್ರಹ್ಮಾಂಡ ತೋರಿದ ಕೃಷ್ಣ ||1|| ಮಣ್ಣಿಗೇ ನಡೆಯಿತು ಮಹಾಭಾರತ ಯುದ್ಧ ಮಣ್ಣಿಗೇ ಮಡಿದರ ಸಂಖ್ಯೆಗೆಣೆಯಿಲ್ಲ ಮಣ್ಣಲಿ ಬಿತ್ತೆ ಬೀಜ ಮಹಾವೃಕ್ಷವಾಗುವುದು ಅಣ್ಣ ನಮ್ಮಾದಿಕೇಶವನ ಅನುಗ್ರಹದಿಂ ||2||

Thoughts & Reflections

0

No reflections shared yet. Be the first to share your thoughts!

Share your thought