Bhasaka
← Back to home

ಮರವ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ

Author: ಕನಕದಾಸCategory: ಇತರೆRaaga: ಬೇಹಾಗ್Taala: ಆಟತಾಳ
ಮರವ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ- ಇದರ ಕುರುಹ ಪೇಳಿ ಕುಳಿತಿರುವ ಜನರು ||ಪ|| ಒಂಟಿ ಕೊಂಬಿನ ಪಕ್ಷಿ ಒಡಲೊಳಗೆ ಕರುಳಿಲ್ಲ ಗಂಟಲು ಮೂರುಂಟು ಮೂಗು ಇಲ್ಲ ಕುಂಟು ಮನುಜನ ತೆರದಿ ಕುಳಿತಿಹುದು ಮನೆಯೊಳಗೆ ಎಂಟು ಹತ್ತರ ಭಕ್ಷ್ಯ, ಭಕ್ಷಿಸುವುದು ||1|| ನಡುವೆ ಕಲಿಯುಂಬುವುದು ನಡುನೆತ್ತಿಯಲಿ ಬಾಯಿ ಕಡು ಸ್ವರಗಳಿಂದ ಗಾನ ಮಾಡುವುದು ಅಡವಿಯಲಿ ಹುಟ್ಟುವುದು ಅಂಗವೆರಡಾಗುವುದು ಬಡತನ ಬಂದರೆ ಬಹಳ ರಕ್ಷಿಪುದು ||2|| ಕಂಜವದನೆಯರ ಕರದಲ್ಲಿ ನಲಿದಾಡುವುದು ಎಂಜಲನುಣಿಸುವುದು ಮೂಜಗಕೆ ರಂಜಿಪ ಶಿಖಾಮಣಿ ಸಿಂಹಾಸನದ ಮೇಲಿರ್ಪ ಸಂಜೀವ ಪಿತ ಆದಿಕೇಶವನೆ ಬಲ್ಲ ||3||

Thoughts & Reflections

0

No reflections shared yet. Be the first to share your thoughts!

Share your thought