Bhasaka
← Back to home

ಮರೆಯದಿರು ಹರಿಯ

Author: ಕನಕದಾಸCategory: ಶ್ರೀಕೃಷ್ಣRaaga: ಭೈರವೀTaala: ಆದಿತಾಳ
ಮರೆಯದಿರು ಹರಿಯ ಮರೆವರೆ ಮೂರು ಲೋಕದ ಧೊರಿಯ ||ಪ|| ಮದಗಜ ಹರಿಯೆಂದು ಕರೆಯಲು ಒದಗಿ ಆಕ್ಷಣ ಬಂದು ಮುದದಿ ನಕ್ರನ ಕೊಂದು ಸಲ ಹಿದ ಸದ್ಭಕ್ತರ ಬಂಧು ಹದುಳ ಪ್ರಹ್ಲಾದನ ಹೆದರಿಸಿದಸುರನ ಉದರವ ಬಗೆದಂಥದುಭುತ ಮಹಿಮನ ||1|| ನಾರಿಯು ತನ್ನ ಕರೆದ ಮಾತ್ರದಿ ಸೀರೆಯ ಮಳೆಗರೆದ ಕ್ರೂರ ಖಳನ ತರಿದು ಆ ಪಾಂಡವರ ಆರಣ್ಯದಿ ಪೊರೆದ ಗಾರಾದಜಮಿಳ ನಾರಗ ಎನಲು ಪಾರಗಾಣಿಸಿದಪಾರ ಗುಣನಿಧಿಯ ||2|| ಒಂದು ಬಾರಿ ಶ್ರೀಶಾ ಎಂದರೆ ಬಂದ ದುರಿತ ನಾಶಾ ಬೆಂದವು ಭವ ಪಾಶಾ- ಅವ ಗೆಂದೆಂದಿಗಿಲ್ಲ ಕ್ಲೇಶಾ ತಂದೆ ಕದರುಂಡಲಗಿ ಹನುಮಯ್ಯನೊಡೆಯ ಚಂದಾದಿಕೇಶವನ ನೆನೆದವರೆಂದಿಗು ಧನ್ಯರು ||3|

Thoughts & Reflections

0

No reflections shared yet. Be the first to share your thoughts!

Share your thought