Bhasaka
← Back to home

ಮುತ್ತುಗಳಾ ಹಣ್ಣು ಕಾಯಾದ ಬಳಿಕಿನ್ನು

Author: ಕನಕದಾಸCategory: ಶ್ರೀಕೃಷ್ಣRaaga: ಸೌರಾಷ್ಟ್ರTaala: ಛಾಪುತಾಳ
ಮುತ್ತುಗಳಾ ಹಣ್ಣು ಕಾಯಾದ ಬಳಿಕಿನ್ನು ಮತ್ತೊಂದು ಚೋದ್ಯ ಕೇಳಿ ಚಿತ್ರ ಹೂವಿನ ಹವಳ ಕಾಯಾಗುವ ಅರ್ಥವ ತಿಳಿದು ಹೇಳಿ ||1|| ಸುಟ್ಟ ಬೀಜವ ಬಿತ್ತಿ ಬೆಳೆಯ ಬಾರದ ಕಾಯಿ ಬೆಟ್ಟದಿ ಸಾರವನು ತೊಟ್ಟು ಇಲ್ಲದ ಹಣ್ಣ ಮುಟ್ಟಿ ಕೊಯ್ವನು ಒಬ್ಬ ಹುಟ್ಟು ಬಂಜೆಯ ಮಗನು ||2|| ಒಣಗಿದ್ದ ಮರನೇರಿ ಹಣ್ಣು ಕಾಯನು ಮಗನು ದಣಿಯದೆ ಮೆದ್ದಿಳಿದ ರಣದಲ್ಲಿ ತಲೆ ಹೊಯ್ದ ರುಂಡವು ಬೀಳಲು ಹೆಣನೆದ್ದು ಕುಣಿದಾಡಿತು ||3|| ಕಣ್ಣಿಲ್ಲದಾತನು ಕಂಡು ಪಿಡಿದ ಮೃಗ ಕೈಯಿಲ್ಲದಾತನೆಚ್ಚ ಮಣ್ಣಲಿ ಹೊರಳುವ ಕಾಲಿಲ್ಲದಾತನು ಗಣ್ಯವಿಲ್ಲದೆ ಪಿಡಿದ ||4|| ಎಲ್ಲರು ಕೇಳಿ ಕನಕ ಹೇಳಿದ ಮಾತ ಎಲ್ಲರೂ ಗ್ರಹಿಸಿಕೊಳ್ಳಿ ಬೆಳ್ಳಿ ಕಣ್ಣಿನವಗೆ ತಿಳಿಯಲಾರದ ಮಾತು ಬಲ್ಲಾದಿಕೇಶವನು ||5||

Thoughts & Reflections

0

No reflections shared yet. Be the first to share your thoughts!

Share your thought