Bhasaka
← Back to home

ಮೂವರೇರಿದ ಬಂಡಿ ಹೊರೆನೆನದು

Author: ಕನಕದಾಸCategory: ಶ್ರೀಕೃಷ್ಣRaaga: ಕಾಂಬೋಧಿTaala: ಝಂಪೆತಾಳ
ಮೂವರೇರಿದ ಬಂಡಿ ಹೊರೆನೆನೆದು ದೇವಕೀ ನಂದನನು ತಾನೊಬ್ಬ ಬಲ್ಲ ||ಪ|| ಆಡಿ ಪೊತ್ತವನೊಬ್ಬ ನೋಡಿ ತಿರುಗಿದನೊಬ್ಬ ಓಡಾಡಿದನೊಬ್ಬ ಈ ಮೂವರು ಆಡಿದವಗೆ ಕಿವಿಯಿಲ್ಲ ನೋಡಿದವನ ಮಗ ಪಾಪಿ ಓಡಾಡಿದವನೊಬ್ಬ ಓಡನಯ್ಯ ||1|| ಮಾಯಕಾರನು ಒಬ್ಬ ಕಾಯ ಬಡಲಿಗನೊಬ್ಬ ಕಾಯಗಿರಿವೊತ್ತನೊಬ್ಬ ಈ ಮೂವರು ಮಾಯಕಾರಗ ರೂಪ ಕಾಯಬಡಲಿಗೆ ಚೆಲ್ವ ಕಾಯಗಿರಿ ಪೊತ್ತವನು ಕಡುಧರ್ಮಿಯು ||2|| ಹರಿಗೆ ಮಾವನು ಆದ ಹರಿಗಳಿಯ ತಾನಾದ ಹರಿಯು ತನ್ನೊಳಗೆ ತಾ ಹರಿಯೊಳಗೆ ಇಪ್ಪ ಹರಿಯ ರೂಪದ ತಾಳಿ ಇರುಳು ದೈತ್ಯನ ಕೊಂದ ಸಿರಿಧರನು ಕಾಗಿನೆಲೆಯಾದಿಕೇಶವರಾಯ ||3||

Thoughts & Reflections

0

No reflections shared yet. Be the first to share your thoughts!

Share your thought