Bhasaka
← Back to home

ಮೆರೆಯದಿರು ಮೆರೆಯದಿರು ಎಲೆ ಮಾನವ

Author: ಕನಕದಾಸCategory: ಶ್ರೀಕೃಷ್ಣ
ಮೆರೆಯದಿರು ಮೆರೆಯದಿರು ಎಲೆ ಮಾನವ - ನಿನ್ನಸಿರಿಯ ಹವಣೇನು ಹೇಳೆಲೊ ಮಂಕು ಜೀವ ಸಿರಿಯೊಳಗೆ ಮಾಧವನೊ ಹಿರಿಯರೊಳು ಬ್ರಹ್ಮನೋದುರುಳ ರಾವಣನ ಸಂಪದವೊ ನಿನಗೆದುರಿಯೋಧನನಂತೆ ಮಕುಟವರ್ಧನನೊ - ನಿನ್ನಸಿರಿಯ ಹವಣೇನು ಪೇಳೆಲೊ ಮಾನವ ||1|| ಬಲುಹಿನಲಿ ವಾಲಿಯೋ ಚೆಲುವಿಕೆಗೆ ಕಾಮನೋಸಲುಗೆಯಲಿ ನಾರದನೊ ಹೇಳು ನೀನುಕಲಿಗಳೊಳು ಭೀಷ್ಮ ದ್ರೋಣಾಚಾರ್ಯ ಫಲುಗುಣನೊಕುಲದಲ್ಲಿ ವಸಿಷ್ಠನೊ ಹೇಳೆಲೊ ಮಾನವ ||2|| ತ್ಯಾಗದಲಿ ಕರ್ಣನೋ ಭೋಗದಲಿ ಸುರಪನೋಭಾಗ್ಯದಲಿ ದಶರಥನೊ ಹೇಳು ನೀನುರಾಗದಲಿ ತುಂಬುರನೊ ಯೋಗದಲಿ ಸನಕನೊಹೀಗ್ಯಾರ ಹೋಲುವೆ ಹೇಳೆಲೊ ಮಾನವ||3|| ಯತಿಗಳಲ್ಲಗಸ್ತ್ಯನೊ ಜೊತೆಯಲಿ ಹನುಮನೊವ್ರತಕೆ ಶುಕಮುನಿಯೇನೊ ಹೇಳು ನೀನುಶ್ರುತಿಪಾಠ ವಿಬುಧರೊಳು ಸೂತನೋ - ನಿನ್ನ ಶುಭಮತಿಯ ಹವಣೇನು ಹೇಳೆಲೊ ಮಾನವ ||4|| ವಿದ್ಯೆಯಲಿ ಸುರಗುರುವೊ ಬುದ್ಧಿಯಲಿ ಮನುಮುನಿಯೊಶ್ರದ್ಧೆಯಲಿ ನೀನಾರ ಹೋಲ್ವೆ ಹೇಳುಸಿದ್ಧರೊಳು ನವಕೋಟಿಯೊಳೊಬ್ಬನೊ ನೀನುಕ್ಷುದ್ರ ಮಾನವ ನಿನ್ನ ಸಿರಿಯ ಹವಣೇನು||5|| ಗೆಲ್ಲು ಸೋಲಿನ ಮಾತು ಸಲ್ಲದೆಲವೋ ನಿನಗೆಎಲ್ಲವನು ಬಿಡು ಗರ್ವ ನಿನಗೇತಕೊಬಲ್ಲೆಯಾದರೆ ಆದಿಕೇಶವನ ನಾಮವನುಸೊಲ್ಲುಸೊಲ್ಲಿಗೆ ತುತಿಸಿ ಸುಖಿಯಾಗಿ ಬಾಳು||6||

Thoughts & Reflections

0

No reflections shared yet. Be the first to share your thoughts!

Share your thought