Bhasaka
← Back to home

ಮೊರೆಹೊಕ್ಕೆ ಹರಿ ನಿಮ್ಮ ಚರಣಕಮಲವ

Author: ಕನಕದಾಸCategory: ಶ್ರೀಕೃಷ್ಣRaaga: ನವರೋಜ್Taala: ತ್ರಿಪುಟತಾಳ
ಮೊರೆಹೊಕ್ಕೆ ಹರಿ ನಿಮ್ಮ ಚರಣಕಮಲವ ನಾನು ಮರೆಯದೆ ಸಲಹೆನ್ನ ವರದಾ ||ಪ|| ಕರಿ ಧ್ರುವ ಪ್ರಹ್ಲಾದ ವಿಭೀಷಣರ ರಕ್ಷಿಸಿದೆ ಪರಂದೇವಿ ವಲ್ಲಭನೆ ವರದಾ ||ಅ|| ಎಂಬತ್ತು ನಾಲ್ಕು ಲಕ್ಷ ಜೀವರಾಶಿ ಯೋನಿಯೊಳು ಹಂಬಲಿಸಿ ನಾ ಬಂದೆ ವರದಾ ಅಂಬುಜೋದ್ಭವನ ಬರೆಹವ ಮೀರಲಾರದೆ ನರ ಬೊಂಬೆ ಗರ್ಭದೊಳಿದ್ದೆ ವರದಾ ||1|| ತುಂಬಿದ್ದ ಕೀವು ಮಲಮೂತ್ರ ರಕ್ತದಿಂ ಹೊರಳುವ ಸಂಭ್ರಮದೊಳಿದ್ದೆ ನಾ ವರದಾ ಒಂಬತ್ತು ಮಾಸವು ಕಳೆದು ಗುಂಡಿಯೊಳಿಳಿದು ಈ ಕುಂಭಿನಿಗೆ ನಾ ಬಂದೆ ವರದಾ ||2|| ನಸುನುಡಿಯನು ಕಲಿತು ನಸುನಗೆಗಳ ನಕ್ಕು ಈ ಕುಶಲದಾಟವ ಕಲಿತೆ ವರದಾ ಎಸೆವ ಯೌವನ ಬಂದು ಶಶಿಮುಖಿಯರೊಳು ಕಾಮ ತೃಷೆಗೆ ನಾನೊಳಗಾದೆ ವರದಾ ||3|| ನುಸುಳಿಸುವ ಚಾಂಡಾಲ ಗುಣವನೆಣಿಸದೆ ಕಾಮ ವಶನಾಗಿ ನಾನಿದ್ದೆ ವರದಾ ಉಸುರಲೆನ್ನಳವಲ್ಲ ಬೆಸನಿತ್ತು ಸಲಹೆನ್ನ ಬಿಸುರುಹಾಕ್ಷನೆ ಕಂಚಿ ವರದಾ ||4|| ಗುರು ಹಿರಿಯರ ಕಂಡು ಸರಿಸಮಾನದಿ ನಾನು ಬೆರೆದುಕೊಂಡಿದ್ದೆನೋ ವರದಾ ನರರ ಕೊಂಡಾಡಿ ನಾಲಗೆಯೊಣಗಿ ಅತಿಯಾಗಿ ನರನರಳಿ ಬೆಂಡಾದೆ ವರದಾ ||5|| ಕಾಸಿಗಾಸೆಯ ಪಟ್ಟು ಸಹಸ್ರ ಲಕ್ಷದ ಪುಸಿಯ ಬೇಸರಿಸದೆ ಬೊಗಳಿದೆ ವರದಾ ವಿಶೇಷ ನಿಮ್ಮಂಘ್ರಿಯ ನಂಬಲಾರದೆ ಕೆಟ್ಟ ದೋಷಕನು ನಾನಾದೆ ವರದಾ ||6|| ಪಂಚೇಂದ್ರಿಯಗಳೊಳಗೆ ಸಂಚರಿಸುವೀ ಮನವು ಕೊಂಚ ಗುಣಕೆಳೆಯುತಿದೆ ವರದಾ ಪಂಚತ್ರಿಂಶತ್ಕೋಟಿ ಭೂಮಂಡಲದೊಳೆನ್ನಂಥ ಪಂಚಪಾತಕನುಂಟೆ ವರದಾ ||7|| ಮುಂಚೆ ಶ್ರೀ ಹರಿಯೆ ನಿಮ್ಮ ವರಧ್ಯಾನ ಮಾಡುವರ ಪಂಚೆಯಲ್ಲಿರಿಸೆನ್ನ ವರದಾ ಪಂಚಬಾಣನ ಪಡೆದ ನೆಲೆಯಾದಿ ಕೇಶವ ಈ ಪ್ರ ಪಂಚವನು ಬಿಡಿಸೆನ್ನ ವರದಾ ||8||

Thoughts & Reflections

0

No reflections shared yet. Be the first to share your thoughts!

Share your thought