Bhasaka
← Back to home

ಅಲ್ಲಿ ನೋಡಲು ರಾಮ

Author: ಪುರಂದರದಾಸCategory: ಶ್ರೀರಾಮRaaga: ದರಬಾರೀ ಕಾನಡಾTaala: ಝಪತಾಲ
ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಎಲ್ಲೆಲ್ಲಿ ನೋಡಿದರು ಅಲ್ಲಿ ಶ್ರೀರಾಮಚಂದ್ರ || ರಾವಣನ ಮೂಲಬಲ ಕಂಡು ಕಪಿಸೇನೆ ಆವಾಗಲೇ ಬೆದರಿ ಓಡಿದವು | ಈ ವೇಳೆ ನರನಾಗಿ ಇರಬಾರದೆಂದೆಣಿಸಿ ದೇವ ಶ್ರೀರಾಮಚಂದ್ರ ಜಗವೆಲ್ಲ ತಾನಾದ || ಇವನಿಗೆ ಅವ ರಾಮ ಅವನಿಗೆ ಇವ ರಾಮ ಅವನಿಯೊಳೀ ಪರಿ ರೂಪವುಂಟೇ | ಲವಮಾತ್ರದಿ ಅಸುರರ್ ದುರುಳತನದಿ ಕೂಡಿ ಅವರವರ್ಹೊಡೆದಾಡಿ ಹತರಾಗಿ ಪೋದರು || ಹನುಮದಾದಿಗಳು ಇವನನಪ್ಪಿಕೊಂಡು ಕುಣಿಕುಣಿದಾಡಿದರು ಹರುಷದಿಂದ | ಕ್ಷಣದಲಿ ಪುರಂದರವಿಟ್ಠಲರಾಯನು ಕೊನೆಗೊಬ್ಬನಾಗಿಯೇ ರಣದಲಿ ನಿಂದ ||

Thoughts & Reflections

0

No reflections shared yet. Be the first to share your thoughts!

Share your thought