Bhasaka
← Back to home

ಯಾಕೆಲೊ ರಂಗ ನಿನಗಿಂತು ನಟನೆಯ ಮಾತು

Author: ಕನಕದಾಸCategory: ಶ್ರೀಮಹಾಲಕ್ಷ್ಮಿRaaga: ಕಾಂಬೋಧಿTaala: ಝಂಪೆತಾಳ
ಯಾಕೆಲೊ ರಂಗ ನಿನಗಿಂತು ನಟನೆಯ ಮಾತು ||ಪ|| ಮಾಕಾಂತ ಕರೆಸಿದರೆ ಬಾರದಿಹ ಪೊಗರು ||ಅ|| ಗೊಲ್ಲತನವಂ ಬಿಡಿಸಿ ಗೋಗಾವ ಡಿಂಬ್ಹರಿಸಿ ಉಳ್ಳ ತಸ್ಕರ ಬುದ್ಧಿ ಕಡೆಗೆ ಇರಿಸಿ ಬಾಲಕನ ವಂದರಿಸಿ ಬಹು ಭಾಗ್ಯವಂತನೆನಿಸಿ ಎಲ್ಲರೊಳು ಸಲಿಗೆ ನಿಲಿಸಿದಳೊ ನಿಮ್ಮರಸಿ ||1|| ಕೆಸರ ಚೊಗೆಯಂಬಿಡಿಸಿ ಗುಂಜ ಸರವಂ ತೆಗಿಸಿ ಬಿಸರುಹ ಮಣಿಮಾಲೆ ಕಡೆಗೆ ಇಡಿಸಿ ಪೊಸ ಪೀತಾಂಬರ ಉಡಿಸಿ ನವರತ್ನವಂ ತೊಡಿಸಿ ವಸುಧೆಯೊಳು ಮಿಗಿಲಾಗಿ ನಿಲಿಸಿದಳೊ ನಮಿಸಿ ||2|| ಎನ್ನ ಮಾತನು ಕೇಳು ಮುನಿಸು ಕೃತ್ಯವ ಸೀಳು ಇನ್ಯಾಕೆ ಯೋಚನೆ ಫಲವ ಪೇಳು ಬಿನ್ನಹವನು ಕೇಳು ನೆರೆಗೂಡಿ ಸುಖಬಾಳು ಚೆನ್ನ ಬಾಡದಾದಿಕೇಶವ ದಯಾಳು ||3||

Thoughts & Reflections

0

No reflections shared yet. Be the first to share your thoughts!

Share your thought