Bhasaka
← Back to home

ಯಾತರವನೆಂದುಸುರಲಿ

Author: ಕನಕದಾಸCategory: ಶ್ರೀಕೃಷ್ಣ
ಯಾತರವನೆಂದುಸುರಲಿ - ಜಗನ್ನಾಥ ಮಾಡಿದ ಒಂದು ನರರೂಪವಯ್ಯ ಮುಟ್ಟು ಹುಟ್ಟಿನೊಳು ನೆಟ್ಟನೆ ನಾ ಬಂದೆತೊಟ್ಟಿದ್ದೆನಾಗ ತೊಗಲಬಕ್ಕಣಇಷ್ಟರೊಳಗೆ ಒಂದು ವಿವರವರಿಯದಂಥಭ್ರಷ್ಟಗೆ ನನಗಿನ್ಯಾತರ ಕುಲವಯ್ಯ ||1|| ಇಂದ್ರಿಯ ಸೂತಕ ದುರ್ಗಂಧದ ಮಲಮೂತ್ರನಿಂದ ಠಾವಲಿ ತನ್ನ ನಿಜವರಿಯದೆಬಂದದ್ದು ಬಚ್ಚಲ ಗುಣಿ ತಿಂದದ್ದು ಮೊಲೆ ಮಾಂಸ - ಇಂಥಅಂಧಕಗೆ ನನಗಿನ್ಯಾತರ ಕುಲವಯ್ಯ ||2|| ಒಂಬತ್ತು ಎಜ್ಜದೊಳೊಸರುವ ಹೊಲಸದುತುಂಬಿ ತುಳುಕುವ ಕೊಡವಾಗಿರಲುಇಂಬಿಲ್ಲದೆ ಹೊಲೆಗೊಂಡ ಠಾವಿನಲಿ ಬಂದಂಥಡಂಬಕ ನನಗಿನ್ಯಾತರ ಕುಲವಯ್ಯ||3|| ಕರುಳು ಖಂಡ ನಾರುವ ಚರ್ಮರೋಹಿತನರಪಂಜರದೀ ಹುರುಳಿಲ್ಲದನರದೇಹ ಹೊತ್ತು ತಿರುಗುವಂಥತಿರುಕ ನನಗಿನ್ಯಾತರ ಕುಲವಯ್ಯ ||4 || ಹಚ್ಚಡದ ಮೇಲೆ ಲಚ್ಚಿಕೆಯಿಟ್ಟಂತೆಹೆಚ್ಚು ಕಡಮೆ ಎಂದು ಹೆಣಗಾಡುತನಿಚ್ಚ ಕಾಗಿನೆಲೆಯಾದಿಕೇಶವನಹುಚ್ಚಗೆ ನನಗಿನ್ಯಾತರ ಕುಲವಯ್ಯ ||5||

Thoughts & Reflections

0

No reflections shared yet. Be the first to share your thoughts!

Share your thought