Bhasaka
← Back to home

ರಾಜವದನೆ ಸುರರಾಜನ ಪುರದೊಳು

Author: ಕನಕದಾಸCategory: ಶ್ರೀಕೃಷ್ಣRaaga: ಕಾಂಬೋಧಿTaala: ಆಟತಾಳ
ರಾಜವದನೆ ಸುರರಾಜನ ಪುರದೊಳು ರಾಜಸುತಿಹ ಕುಜವ ||ಪ|| ರಾಜೀವ ಮುಖಿಯೆನಿಸುವ ಸಖಿಗೊಲಿದಿತ್ತ ರಾಜನ ತೋರೆನಗೆ ||ಅ|| ನೆತ್ತಿಯಿಂದಿಳಿದಳ ಹೆತ್ತ ಮಗನಮೊಮ್ಮ ನೆತ್ತಿದಾತನ ಪಿತನ ತುತ್ತು ಮಾಡುವನ ವೈರಿಯನೇರಿ ಜಗವನು ಸುತ್ತು ಬರುತಲಿಪ್ಪನ ಕತ್ತಲೆಯೊಳು ಕಾದಿ ಅಳಿದಯ್ಯನ ಶಿರವ ಕತ್ತರಿಸಿದ ಧೀರನ ಸತ್ತ ಮಗನ ತಂದಿತ್ತವನನು ಎ ನ್ನೊತ್ತಿಗೆ ಕರೆದು ತಾರೆ ||1|| ವರುಷವೈದರ ಪೆಸರವನ ತಾಯನುಜನ ಧರಿಸಿದಾತನ ಸಖನ ಧುರದೊಳು ತನಗೆ ಬೆಂಬಲ ಮಾಡಿಕೊಂಡು ಭೂ ವರಗೆ ತಾನೊಲಿದವನ ಸುರಗಿರಿಯನು ಸುತ್ತಿ ಬಾಹನ ಸುತನ ಕೈಯಲಿ ಹರಸಿ ದಾನವ ಕೊಂಡನ ಧರಣಿಜಾತನ ಶಿರವರಿದು ನಾರಿಯರನು ಪುರಕೆ ತಂದವನ ತೋರೆ ||2|| ಹನ್ನೆರಡನೆಯ ತಾರೆಯ ಪೆಸರಾಕೆಯ ಕನ್ನೆಯಯ್ಯನ ಮನೆಯ ತನ್ನ ತಾ ಮರೆ ಮಾಡಿಕೊಂಡಿಪ್ಪರಸಿಯ ಬಣ್ಣವ ಕಾಯ್ದಿಹನ ಪನ್ನಗಶಯನ ಬೇಲಾಪುರದರಸನು ತನ್ನ ನೆನೆವ ಭಕ್ತನ ಮನ್ನಿಸಿ ಕಾಯುವ ಚೆನ್ನಾದಿಕೇಶವ ಪ್ರ ಸನ್ನನ ತೋರೆನಗೆ ||3||

Thoughts & Reflections

0

No reflections shared yet. Be the first to share your thoughts!

Share your thought