Bhasaka
← Back to home

ತನುವ ನೀರೊಳಗದ್ದಿ

Author: ಪುರಂದರದಾಸCategory: ಶ್ರೀಕೃಷ್ಣRaaga: ವಸಂತTaala: ಆದಿತಾಳ
ತನುವ ನೀರೊಳಗದ್ದಿ ಫಲವೇನು ಮನದಲಿ ದೃಢಭಕ್ತಿಯಿಲ್ಲದ ಮನುಜನು || ದಾನ ಧರ್ಮಂಗಳ ಮಾಡುವುದೆ ಸ್ನಾನ ಜ್ಞಾನ ತತ್ತ್ವಂಗಳ ತಿಳಿವುದೆ ಸ್ನಾನ ಹೀನ ಪಾಪಂಗಳ ಬಿಡುವುದೆ ಸ್ನಾನ ಧ್ಯಾನದಿ ಮಾಧವನ ನೋಡುವುದೆ ಸ್ನಾನ || ಗುರುಗಳ ಪಾದದರ್ಶನವೆ ಸ್ನಾನ ಹಿರಿಯರ ದರ್ಶನ ಮಾಡುವುದೆ ಸ್ನಾನ ಕರೆದು ಅನ್ನವನಿಕ್ಕುವುದೊಂದು ಸ್ನಾನ ನರಹರಿ ಚರಣವ ನಂಬುವುದೆ ಸ್ನಾನ || ದುಷ್ಟರ ಸಂಗವ ಬಿಡುವುದೆ ಸ್ನಾನ ಶಿಷ್ಟರ ಸಹವಾಸ ಮಾಡುವುದೆ ಸ್ನಾನ ಸೃಷ್ಟಿಯೊಳಗೆ ಸಿರಿ ಪುರಂದರ ವಿಟ್ಠಲನ ಮುಟ್ಟಿ ಭಜಿಸಿದರೆ ವಿರಜಾ ಸ್ನಾನ ||

Thoughts & Reflections

0

No reflections shared yet. Be the first to share your thoughts!

Share your thought