Bhasaka
← Back to home

ರಾಮನಾಮವ ನೆನೆ ಮನವೆ

Author: ಕನಕದಾಸCategory: ಶ್ರೀರಾಮRaaga: ಕಾಂಬೋಧಿTaala: ಆದಿತಾಳ
ರಾಮ ನಾಮವ ನೆನೆ ಮನವೆ ||ಪ|| ರಾಮ ಎಂದವನೆ ಧನ್ಯನೆಂದು ಶ್ರುತಿತತಿಗಳು ಪೊಗಳುತಿರೆ ||ಅ|| ತರುಣತನದಿ ದಿನ ದಾಟಿತು ಸುಮ್ಮನೆ ಶರೀರದೊಳು ಸ್ವರವಾಡುತಲೆ ತರುಣಿ ಸುತರು ಸಂಸಾರವೆಂಬ ಶರಧಿಯೊಳಗೆ ಮುಳುಗಿರದೆ ಮನವೆ ||1|| ಬಗೆಬಗೆ ಜನ್ಮದಿ ಜನಿಸಿದೆ ನಾಳೆಗೆ ಸಿಗುವುದೆ ನಿಜದಿಂ ಈ ಸಮಯ ಮುಗುಧನಾಗಿ ಮತ್ತೆ ಜನಿಸಿ ಬರುವುದು ಸೊಗಸು ಕಾಣುವುದೆ ಛಿ ಮನವೆ ||2|| ಚಿಂತೆಯನೆಲ್ಲ ಒತ್ತಟ್ಟಿಗೆ ಇಟ್ಟು ಅಂತರಂಗದಲಿ ಧ್ಯಾನಿಸುತ ಕಂತುಪಿತ ಕನಕಾದಿಕೇಶವನ ಎಂತಾದರೂ ನೀ ಬಿಡಬೇಡ ಮನವೆ ||3||

Thoughts & Reflections

0

No reflections shared yet. Be the first to share your thoughts!

Share your thought