Bhasaka
← Back to home

ರಾಮಾನುಜ ಮತೋದ್ಧಾರಕ

Author: ಕನಕದಾಸCategory: ಇತರೆRaaga: ಪಂತುವರಾಳಿTaala: ಆಟತಾಳ
ರಾಮಾನುಜ ಮತೋದ್ಧಾರಕ ತಾಮಸಗುಣಪಾಶಗಿರಿವಜ್ರದಂಡ ||ಪ|| ವ್ಯಾಸರ ತೋಳೆಂದು ನಂದಿಯ ಧ್ವಜದಲ್ಲಿ ಹೇಸದೆ ಕಟ್ಟಿ ಪೂಜಿಪರು ನೋಡ ವ್ಯಾಸರದೊಂದು ತೋಳಿಗೆ ಶಿವಶರಣನ ಸಾಸಿರ ತೋಳ್ಗಳ ತರಿದ ನಮ್ಮಯ್ಯ| |1|| ಹರಿ ಎಂಬ ಶಬ್ದವ ಕೇಳಿ ಪಿಟ್ಟಕ್ಕನು ಹರನ ಹೊಟ್ಟೆಯಲ್ಲಿ ಪುಟ್ಟುವೆನೆಂಬಳು ಹರಹರ ಎಂಬ ಶೈವರ ಏಳ್ನೂರು ಶಿರಗಳನರಿದನು ನಮ್ಮ ತಾತಯ್ಯ||2|| ಮಸ್ತಕದೊಳು ರುದ್ರ ಪಾದದೊಳಗೆ ವಿಷ್ಣು ಮಸ್ತಕ ಮಹಾದೇವ ಮೇಲೆಂಬರು ಮಸ್ತಕ ಬಂದು ಪಾದಕೆ ಬಿದ್ದು ಶರಣೆಂಬ ಮುಕ್ತಿಯ ಪಾದ ಮೇಲು ತಿಳಿದು ನೋಡಣ್ಣ ||3|| ಲಿಂಗವೆ ಘನವೆಂದು ಹೆಚ್ಚಿ ಕುಣಿದಾಡುವ ಸಂಗನ ಶರಣರೆಲ್ಲರು ಕೇಳಿರಿ ಲಿಂಗಪ್ರಸಾದವು ಮುಟ್ಟದಂತಾಯಿತು ನಮ್ಮ ರಂಗನ ಪ್ರಸಾದವು ಲೋಕಪಾವನವು ||4|| ಧರೆಯೊಳು ವಿರಕ್ತರು ವೀರ ಪವಾಡವ ಇರಿದು ಎಬ್ಬಿಸುವೆವೆಂದಾಡುವರು ಹರಿಯ ನಾಮಾವಳಿಯ ಅನುಮಾನವಿಲ್ಲದೆಯೆ ಧರಿಸಿದಲ್ಲದೆ ದೊರೆಯದು ಗತಿಯಣ್ಣ ||5|| ಹರಬಂದು ಓಂಕಾರ ಗುರುವೆ ಎನ್ನುತ ಕೃಷ್ಣ ನರಮನೆಯ ಮುಂದೆ ಭಿಕ್ಷವ ಬೇಡಲು ಹರಿಯುಂಡ ಮೇಲೆ ಪ್ರಸಾದವ ನೀಡಲು ಹರ ಉಂಡು ಬ್ರಹ್ಮ ಹತ್ಯೆ ಕಳಕೊಂಡ ||6|| ಶಿವ ಮಹಾದೇವನು, ಧರೆಗೆ ಹರಿಯೆ ದೈವ ಭುವನಕ್ಕೆ ಹರಿಹರರೇಕಸ್ಥರು ಭವರೋಗ ಹರ ಕಾಗಿನೆಲೆಯಾದಿಕೇಶವನ ವಿವರ ತಿಳಿದು ಭಜಿಸಿರೊ ಭಕ್ತ ಜನರು ||7||

Thoughts & Reflections

0

No reflections shared yet. Be the first to share your thoughts!

Share your thought