Bhasaka
← Back to home

ಲಟಪಟ ನಾ ಸಟೆಯಾಡುವೆನಲ್ಲ ಪೋದೆನಲ್ಲ

Author: ಕನಕದಾಸCategory: ಇತರೆRaaga: ಮೋಹನTaala: ಆಟತಾಳ
ಲಟಪಟ ನಾ ಸಟೆಯಾಡುವೆನಲ್ಲ ವಿಠಲನ ನಾಮ ಮರೆತು ಪೋದೆನಲ್ಲ ||ಪ|| ಶೇಷಗಿರಿಯ ಮೇಲೆ ಸವುತೆಯ ಬಿತ್ತಿ ದೇವಗಿರಿಯ ಮೇಲೆ ಅವತಾರವಿಕ್ಕಿ ಹಾಳೂರಿನೊಳಗೊಬ್ಬ ಕುಂಬಾರ ಸತ್ತ ಗೋಕರ್ಣದೊಳಗೊಬ್ಬ ಪರದೇಶಿ ಅತ್ತ ||1|| ಆ ಸಮಯದಿ ಮೂರು ರಾಯರ ಕಂಡೆ ಕುಪ್ಪುಸ ತೊಟ್ಟ ಕೋಳಿಯ ಕಂಡೆ ಬೆಳ್ಳಕ್ಕಿ ಬೆರಣಿಯ ಮಾಳ್ಪುದ ಕಂಡೆ ನರೆಸೂಳೆ ಗೆಯ್ವುದ ಕಣ್ಣಾರೆ ಕಂಡೆ ||2|| ನುಸಿಯೊಂದು ರೊಟ್ಟಿಯ ಸುಡುವುದು ಕಂಡೆ ಆಡೊಂದು ಮದ್ದಳೆ ಬಡಿವುದ ಕಂಡೆ ಕಪ್ಪೆ ತತ್ಥೈಯೆಂದು ಕುಣಿವುದ ಕಂಡೆ ಬಾಡದಾದಿಕೇಶವನ ಕಣ್ಣಾರೆ ಕಂಡೆ ||3||

Thoughts & Reflections

0

No reflections shared yet. Be the first to share your thoughts!

Share your thought