Bhasaka
← Back to home

ಲಾಲಿ ಪಾವನ ಚರಣ ಲಾಲಿ ಅಘಹರಣ

Author: ಕನಕದಾಸCategory: ಶ್ರೀಕೃಷ್ಣRaaga: ಆನಂದ ಭೈರವಿTaala: ಆಟತಾಳ
ಲಾಲಿ ಪಾವನ ಚರಣ ಲಾಲಿ ಅಘಹರಣ ಲಾಲಿ ವೆಂಕಟರಮಣ ಲಲಿತ ಕಲ್ಯಾಣ ||ಪ|| ವನಜಾಕ್ಷ ಮಾಧವ ವಸುದೇವತನಯ ಸನಕಾದಿ ಮುನಿವಂದ್ಯ ಸಾಧುಜನಪ್ರಿಯ ಇನಕೋಟಿಶತತೇಜ ಮುನಿಕಲ್ಪಭೂಜ ಕನಕಾದ್ರಿನಿಲಯ ವೆಂಕಟರಾಯ ಜೀಯ ||1|| ಜಗದೇಕನಾಯಕ ಜಲಜದಳನೇತ್ರ ಖಗರಾಜವಾಹನ ಕಲ್ಯಾಣ ಚರಿತ ಸಗರತನಯಾರ್ಚಿತ ಸನಕಾದಿವಿನುತ ರಘುವಂಶಕುಲತಿಲಕ ರಮಣೀಯ ಗಾತ್ರ ||2|| ನಂದಗೋಪಕುಮಾರ ನವನೀತ ಚೋರ ಮಂದಾಕಿನೀ ಜನಕ ಮೋಹನಾಕಾರ ಇಂದುಧರಸತಿ ವಿನುತ ವಿಶ್ವಸಂಚಾರ ನಂದಗೋವಿಂದ ಮುಚುಕುಂದ ನುತಸಾರ ||3|| ಪಕ್ಷಿವಾಹನ ವಿಷ್ಣು ಪಾಹಿ ಪರಮೇಶ ರಕ್ಷ ಕೌಸ್ತುಭಭೂಷ ವೈಕುಂಠವಾಸ ಅಕ್ಷಯ ಫಲದಾತ ಅಖಿಳ ಲೋಕೇಶ ಲಕ್ಷಣ ಪರಿಪೂರ್ಣ ಲಕ್ಷ್ಮೀಪ್ರಾಣೇಶ ||4||

Thoughts & Reflections

0

No reflections shared yet. Be the first to share your thoughts!

Share your thought