Bhasaka
← Back to home

ವನಜ ಮುಖಿಯರ ಮನದಿಷ್ಟಾರ್ಥವನೀವನ

Author: ಕನಕದಾಸCategory: ಶ್ರೀಕೃಷ್ಣRaaga: ಕಾಂಬೋಧಿTaala: ಆಟತಾಳ
ವನಜ ಮುಖಿಯರ ಮನದಿಷ್ಟಾರ್ಥವನೀವನ- ಶ್ರೀ ಕೃಷ್ಣ ಎನ್ನಿರೊ ಮನು ಮುನಿಜನರನು ಅನುದಿನರೊಳು ಪೊರೆವನ- ಶ್ರೀ ಕೃಷ್ಣ ಎನ್ನಿರೊ ||ಪ|| ಪಣ್ಣ ಕೊಯ್ದನನುಜಗೆ ಸಹಾಯನಾದನ- ಶ್ರೀ ಕೃಷ್ಣ ಎನ್ನಿರೊ ಸಣ್ಣ ಸೀರೆಯ ನಲ್ವೆಣ್ಣು ರೂಪಾದನ- ಶ್ರೀ ಕೃಷ್ಣ ಎನಿರೊ ಅಣ್ಣನ ವೈರಿಯ ಮಗನ ಕೊಂದಾತನ- ಶ್ರೀ ಕೃಷ್ಣ ಎನ್ನಿರೊ ಬಣ್ಣಿಸಲರಿಯೆ ನಾನಿವನ ಮಹಿಮೆಯ- ಶ್ರೀ ಕೃಷ್ಣ ಎನ್ನಿರೊ ||1|| ಮುತ್ತಯ್ಯನಿರೆ ಮೊಮ್ಮಗಗೆ ಪಟ್ಟಗಟ್ಟಿದನ- ಶ್ರೀ ಕೃಷ್ಣ ಎನ್ನಿರೊ ಹೆತ್ತವಳಿರೆ ತಾಯ ಬೇರೆ ಪಡೆದಾತನ- ಶ್ರೀ ಕೃಷ್ಣ ಎನ್ನಿರೊ ಮತ್ತೇಭಗಾಮಿನಿಗಾಗಿ ವನವಾಸ ಪೋದನ- ಶ್ರೀ ಕೃಷ್ಣ ಎನ್ನಿರೊ ಮತ್ತೆ ಹಿರಣ್ಯಕಗೆ ಕಂಬದಲಿ ತೋರ್ದನ- ಶ್ರೀ ಕೃಷ್ಣ ಎನ್ನಿರೊ ||2|| ಉಗುರು ಕೊನೆಗಳಿಂದ ನಗವನೆತ್ತಿದನ- ಶ್ರೀ ಕೃಷ್ಣ ಎನ್ನಿರೊ ಬೊಗಸೆಗಂಗಳ ಬಾಲೆಯರ ತಂದಾತನ- ಶ್ರೀ ಕೃಷ್ಣ ಎನ್ನಿರೊ ಮಗಳ ಗಂಡನ ಶಿರವನೆ ಛೇದಿಸಿದನ- ಶ್ರೀ ಕೃಷ್ಣ ಎನ್ನಿರೊ ಸುಗುಣರನ್ನ ಕಾಗಿನೆಲೆಯಾದಿಕೇಶವನ- ಶ್ರೀ ಕೃಷ್ಣ ಎನ್ನಿರೊ ||3||

Thoughts & Reflections

0

No reflections shared yet. Be the first to share your thoughts!

Share your thought