Bhasaka
← Back to home

ವರವ ಕೊಡು ಎನಗೆ ವಾಗ್ದೇವಿ

Author: ಕನಕದಾಸCategory: ಶ್ರೀಕೃಷ್ಣ
ವರವ ಕೊಡು ಎನಗೆ ವಾಗ್ದೇವಿ - ನಿಮ್ಮಚರಣ ಕಮಲಂಗಳ ದಯಮಾಡು ದೇವಿ ಶಶಿ ಮುಖದ ನಸುನಗೆಯ ಬಾಲೆಎಸೆವ ಕರ್ಣದ ಮುತ್ತಿನೋಲೆನಸುನಗುವ ಸುಪಲ್ಲ ಗುಣಶೀಲೆ - ದೇವಿಬಿಸಜಾಕ್ಷಿ ಎನ್ನ ಹೃದಯದೊಳು ನಿಂದವಳೆ ||1|| ಇಂಪು ಸೊಂಪಿನ ಚಂದ್ರ ಬಿಂಬೆಕೆಂಪು ತುಟಿಗಳ ನಾಸಿಕದ ರಂಭೆಜೊಂಪು ಮದನನ ಪೂರ್ಣ ಶಕ್ತಿ ಬೊಂಬೆ - ಒಳ್ಳೆಸಂಪಗೆ ಮುಡಿಗಿಟ್ಟು ರಾಜಿಪ ಶಾರದಾಂಬೆ||2|| ರವಿಕೋಟಿ ತೇಜಪ್ರಕಾಶೆ - ಮಹಾಕವಿ ಜನರ ಹೃತ್ಕಮಲ ವಾಸೆಅವಿರಳ ಪುರಿ ಕಾಗಿನೆಲೆಯಾದಿಕೇ-ಶವನ ಸುತನಿಗೆ ಸನ್ನುತ ರಾಣಿವಾಸೆ ||3||

Thoughts & Reflections

0

No reflections shared yet. Be the first to share your thoughts!

Share your thought