Bhasaka
← Back to home

ವ್ಯರ್ಥವಾಯಿತಲ್ಲ ಜನ್ಮವು ಸಾರ್ಥಕಾಗಲಿಲ್ಲ

Author: ಕನಕದಾಸCategory: ವೈರಾಗ್ಯRaaga: ಸುರಟTaala: ಆದಿತಾಳ
ವ್ಯರ್ಥವಾಯಿತಲ್ಲ ಜನ್ಮವು ಸಾರ್ಥಕಾಗಲಿಲ್ಲ ||ಪ|| ಅರ್ಥದಾಸೆಯಲಿ ಪೃಥ್ವಿಯೊಳಗೆ ಸುತ್ತಿ ಮತ್ತನಾಗಿ ಬಲು ಕೃತ್ಯಗಳನು ಮಾಡಿ ||ಅ|| ಹರಿಯ ನೆನೆಯಲಿಲ್ಲ ಹರುಷದಿ ಗರುವ ಪುಟ್ಟಿತಲ್ಲ ಪರಮ ಮೂಢರಲಿ ನಿರುತ ಸಂಗವ ಮಾಡಿ ಗುರುಹಿರಿಯರ ದಯೆ ದೊರೆಯದೆ ಸುಮ್ಮನೆ ||1|| ಏನು ಪೇಳಲೇನು ಎನಗೆ ಹೀನ ಬಿಡದು ಮುನ್ನ ಶ್ವಾನಗಿಂತಲು ಬಲು ಮಾನಗೆಟ್ಟು ನಾ ದೀನನಾಗಿ ಮನೆಮನೆಗಳ ತಿರುಗಿ ||2|| ಭಾಗವತರ ಪಾದಕ್ಕೊಂದಿನ ಬಾಗಿ ನಡೆಯಲಿಲ್ಲ ರಾಗರಂಗು ಭಕ್ತಿಭಾವದೊಳು ಬೀಗಿ ಚೆನ್ನಕೇಶವನನು ನೆನೆಯದೆ ||3||

Thoughts & Reflections

0

No reflections shared yet. Be the first to share your thoughts!

Share your thought