Bhasaka
← Back to home

ಶೇಷಶಯನ ನಿನ್ನ ಪರಮ ಭಾಗವತರ

Author: ಕನಕದಾಸCategory: ಶ್ರೀಕೃಷ್ಣRaaga: ಸಾವೇರೀTaala: ಅಟ್ಟ
ಶೇಷಶಯನ ನಿನ್ನ ಪರಮ ಭಾಗವತರ ಸಹ ವಾಸದೊಳಿರಿಸು ಕಂಡ್ಯ ಎನ್ನದು ||ಪ|| ಬೇಸರಿಸದೆ ನಿನ್ನ ಹೃದಯಾಬ್ಬದೊಳಗಿರುವ ದಾಸರೊಳಿರಿಸು ಕಂಡ್ಯ ಎನ್ನನು ||ಅ|| ತಂದೆಯೊಡಲನು ಸೀಳಿಸಿದವರೊಳು, ದೇ ವೇಂದ್ರನ ತಲೆಗೆ ತಂದವರೊಳು, ದು ರ್ಗಂಧ ಪೆಣ್ಣಿಗೆ ಚಂದನದ ಕಂಪನಿತ್ತಂಥ ಬಾಂಧವರೊಳಗಿರಿಸು ಕಂಡ್ಯ ಎನ್ನನು ||1|| ತೋಯಜವೆಂಬ ಪುಷ್ಪದ ಪೆಸರವರೊಳು ತಾಯ ಸೊಸೆಗೆ ಮಕ್ಕಳಿತ್ತವರೊಳು ಆಯದಿ ದ್ವಾದಶಿ ವ್ರತವ ಸಾಧಿಸಿದಂಥ ರಾಯರೊಳಿರಿಸು ಕಂಡ್ಯ ಎನ್ನನು ||2|| ಗಿಳಿನಾಯಿ ಪೆಸರಿನವರೊಳು, ಮುಗಿಲ ಹೊಳೆಯ ಹೊಟ್ಟೆಲಿ ಹುಟ್ಟಿದವರೊಳು ಕೆಳದಿಯ ಜರಿದು ಶ್ರೀಹರಿದಿನ ಗೆದ್ದಂಥ ಹಳಬರೊಳಿರಿಸು ಕಂಡ್ಯ ಎನ್ನನು ||3|| ಅಂಕಕ್ಕೆ ರಥವ ನಡೆಸಿದವರೊಳು, ನಿ ಶ್ಯಂಕೆ ಧರ್ಮವ ಗೆದ್ದ ಹಿರಿಯರೊಳು ಲಂಕೆಯ ಅನುದಿನ ಸ್ಥಿರರಾಜ್ಯವಾಳಿದ ಕಿಂಕರರೊಳಿರಿಸು ಕಂಡ್ಯ ಎನ್ನನು ||4|| ಕಾಟಿಗೆ ಕಾಸಿಲ್ಲದವರು ರಾಯರ ಪಂಕ್ತಿ ಊಟವ ಬಯಸಿದಂತೆ ನಾ ಬೇಡಿದೆ ನಾಟಕಧರ ನೆಲೆಯಾದಿಕೇಶವ, ನೀ ನ್ನಾಟದೊಳಿರಿಸು ಕಂಡ್ಯ ಎನ್ನನು ||5||

Thoughts & Reflections

0

No reflections shared yet. Be the first to share your thoughts!

Share your thought