Bhasaka
← Back to home

ಶ್ರೀರಾಮ ಎನ್ನಿರೊ ಮೂಜಗದವರೆಲ್ಲ

Author: ಕನಕದಾಸCategory: ಶ್ರೀರಾಮRaaga: ಕೇದಾರಗೌಳTaala: ಆದಿತಾಳ
ಶ್ರೀರಾಮ ಎನ್ನಿರೊ ಮೂಜಗದವರೆಲ್ಲ ಈರೇಳು ಭುವನ ತನ್ನುದರದೊಳಿಟ್ಟನ ||ಪ|| ಅನಿಮಿಷರಂದದಿ ವನವಾಸಕೆ ಹೋದವನ- ಶ್ರೀರಾಮ ಎನ್ನಿರೊ ಮನಿಸಿಜ ನಾರಿಯ ಪಿತನ ಕೊಂದನ ಪಿತನ ಪೊತ್ತವನ- ಶ್ರೀರಾಮ ಎನ್ನಿರೊ ಘನ ಕೋಡ ಕೊನೆಯಿಂದ ಧರಣಿಯ ತಾಳ್ದವನ- ಶ್ರೀರಾಮ ಎನ್ನಿರೊ ದಿನಕರನಳಿವಿನಲಿ ಪಗೆಯ ಗೆದ್ದಾತನ- ಶ್ರೀರಾಮ ಎನ್ನಿರೊ ||1|| ಗಜವನೇರಿದವನ ತಂದೆಯ ತಾಯನಳೆದವನ- ಶ್ರೀರಾಮ ಎನ್ನಿರೊ ಭುಜಬಲದಿಂದ ಭೂಪಾಲರ ಗೆದ್ದವನ - ಶ್ರೀರಾಮ ಎನ್ನಿರೊ ನಿಜಮುನಿಗಳ ವನದಿಂದ ತನಯರ ತಂದವನ- ಶ್ರೀರಾಮ ಎನ್ನಿರೊ ಭುಜಗಧರನ ಕೈಯ ಆಯುಧವನು ತಂದವನ- ಶ್ರೀರಾಮ ಎನ್ನಿರೊ ||2|| ಪೆಣನ ಭೋಜನ ಮಾಡಿದವರ ವಾಸವ ಹೊಕ್ಕವನ- ಶ್ರೀರಾಮ ಎನ್ನಿರೊ ತೃಣಕೆ ಬಾಯಿತ್ತನ ಮೇಲೇರಿ ಬಪ್ಪನ- ಶ್ರೀರಾಮ ಎನ್ನಿರೊ ಅಣುರೇಣು ತೃಣದೊಳು ಪರಿಪೂರ್ಣನಾದನ- ಶ್ರೀರಾಮ ಎನ್ನಿರೊ ಪ್ರಣವಗೋಚರ ಕಾಗಿನೆಲೆಯಾದಿಕೇಶವನ- ಶ್ರೀರಾಮ ಎನ್ನಿರೊ ||3||

Thoughts & Reflections

0

No reflections shared yet. Be the first to share your thoughts!

Share your thought