Bhasaka
← Back to home

ಸಜ್ಜನರ ಸಂಗದೊಳಗಿರಿಸೆನ್ನ ರಂಗ

Author: ಕನಕದಾಸCategory: ಇತರೆRaaga: ಹಂಸಧ್ವನಿTaala: ರೂಪಕತಾಳ
ಸಜ್ಜನರ ಸಂಗದೊಳಗಿರಿಸೆನ್ನ ರಂಗ ||ಪ|| ದುರ್ಜನರ ಸಂಗ ನಾನೊಲ್ಲೆ ಮಂಗಳಾಂಗ ||ಅ|| ಕೂಡಿದ ಸಭೆಯಲಿ ಕುತ್ಸಿತವ ನುಡಿವನ ಸಂಗ ನಾಡಿನೊಳಗನ್ಯಾಯವ ಮಾಡುವನ ಸಂಗ ಬೇಡಿದರು ಕೊಡದಿರುವ ಕಡುಲೋಭಿಯ ಸಂಗ ಮೂಢ ಮೂರ್ಖರ ಸಂಗ ಬಲು ಭಂಗ ಎಲೊ ರಂಗ ||1|| ಗುರು ಸತಿಗೆ ಪರಸತಿಗೆ ಎರಡು ಬಗೆವರ ಸಂಗ ಗುರು ನಿಂದೆ ಪರನಿಂದೆ ಮಾಡುವರ ಸಂಗ ಪರಹಿತಾರ್ಥದ ಧರ್ಮವರಿಯದವರ ಸಂಗ ಮರುಳ ಪಾಮರ ಸಂಗ ಬಲು ಭಂಗ ಎಲೊ ರಂಗ ||2|| ಆಗಮದ ಅನ್ವಯವನರಿಯದವನ ಸಂಗ ರೋಗದಲಿ ಆವಾಗಲು ಮುಲುಕುವವನ ಸಂಗ ಕಾಗಿನೆಲೆಯಾದಿಕೇಶವನಂಘ್ರಿ ನೆನೆಯದಿಹ ಭಾಗವತರ ಸಂಗ ಬಲು ಭಂಗ ಎಲೊರಂಗ ||3||

Thoughts & Reflections

0

No reflections shared yet. Be the first to share your thoughts!

Share your thought