Bhasaka
← Back to home

ಸಾಧು ಸಜ್ಜನ ಸತ್ಯಗುಣಕಿದಿರುಂಟೆ

Author: ಕನಕದಾಸCategory: ಶ್ರೀಕೃಷ್ಣRaaga: ಭೈರವೀTaala: ತ್ರಿಪುಟತಾಳ
ಸಾಧು ಸಜ್ಜನ ಸತ್ಯಗುಣಕಿದಿರುಂಟೆ ಆದಿಕೇಶವನ ಪೋಲುವ ದೈವವುಂಟೆ ||ಪ|| ಸತ್ಯವ್ರತವುಳ್ಳವಗೆ ಮೃತ್ಯು ಭಯವುಂಟೆ ಚಿತ್ತಶುದ್ಧಿಯಿಲ್ಲದವಗೆ ಪರಲೋಕವುಂಟೆ ವಿತ್ತವನರಸುವಂಗೆ ಮುಕ್ತಿಯೆಂಬುದುಂಟೆ ಉತ್ತಮರ ಸಂಗಕಿಂತಧಿಕ ಧರ್ಮವುಂಟೆ ||1|| ಸುತಲಾಭಕಿಂತಧಿಕ ಲಾಭವುಂಟೆ ಮತಿರಹಿತನೊಳು ಚತುರತೆಯುಂಟೆ ಪತಿಸೇವೆಗಿಂತಧಿಕ ಸೇವೆಯುಂಟೆ ಸತಿಯಿಲ್ಲದವಗೆ ಸಂಪದವೆಂಬುದುಂಟೆ ||2|| ಪಿಸುಣಗಿನ್ನಧಿಕ ಹೀನನುಂಟೆ ವಸುಧೆಯೊಳನ್ನದಾನಕೆ ಸರಿಯುಂಟೆ ಅಶನವ ತೊರೆದ ಯೋಗಿಗೆ ಭಯವುಂಟೆ ವ್ಯಸನಿಯಾದ ನೃಪನಿಗೆ ಸುಖವುಂಟೆ ||3|| ಧನಲೋಭಿಗಿನ್ನಧಿಕ ಹೀನನುಂಟೆ ಮನವಂಚಕ ಕಪಟಿಗೆ ನೀತಿಯುಂಟೆ ಸನುಮಾನಿಸುವ ಒಡೆಯಗೆ ಬಡತನವುಂಟೆ ವಿನಯವಾಗಿಹ ಸಂಗದೊಳು ಭಂಗವುಂಟೆ ||4|| ಹರಿಭಕ್ತಿಯಿಲ್ಲದವಗೆ ಪರಲೋಕವುಂಟೆ ಪರಮ ಸಾತ್ತ್ವಿಕ ಗುಣಕೆ ಪಿರಿದುಂಟೆ ಪರನಿಂದೆಗಿಂತಧಿಕ ಪಾತಕವುಂಟೆ ವರದಾದಿಕೇಶವನಲ್ಲದೆ ದೈವವುಂಟೆ ||5||

Thoughts & Reflections

0

No reflections shared yet. Be the first to share your thoughts!

Share your thought