Bhasaka
← Back to home

ಹರಿಮುಖಿ ಹರಿವಾಣಿ ಹರಿವೇಣಿ ಹರಿಣಾಕ್ಷಿ

Author: ಕನಕದಾಸCategory: ಶ್ರೀಕೃಷ್ಣRaaga: ಮೋಹನTaala: ಆಟತಾಳ
ಹರಿಮುಖಿ ಹರಿವಾಣಿ ಹರಿವೇಣಿ ಹರಿಣಾಕ್ಷಿ ಹರಿ ಮಧ್ಯೆ ಹರಿಗಮನೆ ||ಪ|| ಹರಿಯ ನಂದನ ಸಖನೆನಿಪ ಅಹೋಬಲದ ಹರಿಯ ನೀ ತಂದು ತೋರೆ ||ಅ|| ಎರವಿನ ತಲೆಯವನಣ್ಣನಯ್ಯನ ಪರಮ ಸಖನ ಸುತನ ಹಿರಿಯಣ್ಣನಯ್ಯನ ಮೊಮ್ಮನ ಮಾವನ ತರಿದೊಟ್ಟಿದನ ಹಗೆಯ ಗುರುವಿನ ಮುಂದೆ ಮುಂದಿಹ ಬಾಹನ ಕಿರಿಯ ಮಗನ ರಾಣಿಯ ದುರುಳತನದಿ ಸೆಳೆದುಕೊಂಡನ ಕೊಂದನ ತರಳೆ ನೀ ತಂದು ತೋರೆ ||1|| ಸೋಮನ ಜನಕನ ಸತಿಯ ಧರಿಸಿದನ ರೋಮ ಕೋಟಿಯೊಳಿಟ್ಟಿಹನ ಕಾಮಿನಿ ಸತಿಯ ಕಂದನ ತಮ್ಮಗೊಲಿದನ ಭಾಮೆ ನೀ ತಂದು ತೋರೆ ||2|| ಶ್ರುತಿಯನುದ್ಧರಿಸಿ ಭೂಮಿಯ ಪೊತ್ತು ಅಡವಿಯ ಪಥದೊಳು ತಿರುಗಿದನ ಅತಿಶಯ ನರಹರಿ ವಾಮನ ರೂಪಿನ ಪಿತನ ಮೋಹದ ರಾಣಿಯ ||3|| ಹತ ಮಾಡಿ ಸತ್ಯಕ್ಕೆ ನಿಂತು ನಗವ ಹೊತ್ತು ಪತಿವ್ರತೆಯರ ಭಂಗಿಸಿ ಕ್ಷಿತಿಯೊಳು ರಾವುತನಾದ ಬಾಡ ದಾದಿಕೇಶವನ ತಂದು ತೋರೆ ||3||

Thoughts & Reflections

0

No reflections shared yet. Be the first to share your thoughts!

Share your thought